ಮಂಗಳೂರು, ಜೂ 19 (DaijiworldNews/DB): ಯೂಟ್ಯೂಬ್ ಚಾನೆಲ್ವೊಂದರ ವಿರುದ್ದ 'ಪೆಪ್ಪೆರೆರೆ ಪೆರೆರೆರೆ' ತುಳು ಚಿತ್ರವನ್ನು ಪೈರಸಿ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ತುಳು ಸೂಪರ್ ಕಾಮಿಡಿ 2.0 ಎಂಬ ಯೂಟ್ಯೂಬ್ ಚಾನೆಲ್ನವರ ವಿರುದ್ದ ಪೈರಸಿ ಆರೋಪದಲ್ಲಿ ದೂರು ದಾಖಲು ಮಾಡಲಾಗಿದೆ. ನಿಶಾಂತ್ ಮೂವೀಸ್ ಎಂಬ ಸಂಸ್ಥೆಯು ಚಿತ್ರವನ್ನು ಕನ್ನಡ ಚಲನ ಚಿತ್ರ ಮಂಡಳಿಯಿಂದ ಅನುಮೋದನೆ ಪಡೆದು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿ ಓಟಿಟಿ ಪ್ಲಾಟ್ ಫಾರ್ಮ್ನಲ್ಲಿ ಈ ಚಿತ್ರವನ್ನು ಪ್ರಸಾರ ಮಾಡಿತ್ತು. ಆದರೆ ಇದೀಗ ಪೈರಸಿ ಮಾಡಿರುವ ಚಾನೆಲ್ ಚಿತ್ರ ತಯಾರಕರ ಅನುಮತಿ ಪಡೆಯದೇ ಪ್ರಸಾರ ಮಾಡಿರುವುದರಿಂದ ಅನುಮೋದನೆ ಪಡೆದು ಪ್ರಸಾರದ ಹಕ್ಕು ಪಡೆದುಕೊಂಡ ನಿಶಾಂತ್ ಮೂವೀಸ್ ಸಂಸ್ಥೆಗೆ ನಷ್ಟವುಂಟು ಮಾಡಿದ್ದಾರೆ ಎಂದೂ ದೂರಿನಲ್ಲಿ ತಿಳಿಲಸಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.