ಕಾರ್ಕಳ, ಜೂ 18 (DaijiworldNews/HR): ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಸೇನೆಯ ಮೂರು ಅಂಗಗಳ ಮುಖ್ಯಸ್ಥರು ಘೋಷಿಸಿರುವ ಅಗ್ನಿಪಥ ಯೋಜನೆಯು ಭಾರತದ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಿದೆ ವಿಶೇಷವಾಗಿ ವಿದ್ಯಾಭ್ಯಾಸ ಮುಂದುವರೆಸಲಾಗದ ಬಡ ಕುಟುಂಬದ ಯುವಕರಿಗೆ ಈ ಯೋಜನೆಯಿಂದ ಬಹು ಪ್ರಯೋಜನವಾಗಲಿದೆ ಎಂದು ಕಾರ್ಕಳ ಬಿಜೆಪಿ ವಕ್ತಾರ ಕೆ.ಎಸ್ ಹರೀಶ್ ಶೆಣೈ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, 17 ನೇ ವರ್ಷ ಪ್ರಾಯದಿಂದ ಸುಮಾರು 21 ವರ್ಷ ಪ್ರಾಯದ ತನಕ ಜೀವನದಲ್ಲಿ ಶಿಸ್ತಿನ ಅಭ್ಯಾಸ ಮಾಡುತ್ತೇವೆಯೋ ಅದು ಅವನ ಜೀವನ ಶೈಲಿಯನ್ನೆ ವರದಾನವಾಗಿ ಪರಿಣಮಿಸುತ್ತದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ 17 ವರ್ಷದ ಯುವಕರಿಗೆ ಅಗ್ನಿವೀರರಾಗಿ ಸೇವೆ ಸಲ್ಲಿಸುವಂತಹ 4 ವರ್ಷಗಳ ಅವಧಿಯ ಅವಕಾಶದಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸದೃಡವಾಗಿರುತ್ತದೆ. ಸೈನ್ಯದ ವಾತವರಣದಲ್ಲಿ ಬೆಳೆಸಿಕೊಂಡ ರಾಷ್ಟ್ರಪ್ರೇಮ ಇವರ ಮನೆಯ ಸದಸ್ಯರನ್ನು ಹಾಗೂ ಮಿತ್ರರನ್ನು ಕೂಡ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತದೆ 4 ವರ್ಷಗಳ ಸೇನೆಯ ಉದ್ಯೋಗದ ಬಳಿಕ ಅವರನ್ನು ಪೊಲೀಸ್ ಪಡೆಗಳಿಗೆ, ಖಾಸಗಿ ವಲಯದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ಅವಕಾಶ ಇದ್ದುದರಿಂದ ಸಮಾಜದಲ್ಲಿ ಶಿಸ್ತು ಬಂದು
ಅಪರಾಧಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.
ಇನ್ನು ವಿಶೇಷವಾಗಿ ಯೌವನದಲ್ಲಿ ಅನ್ಯ ಚಟುವಟಿಕೆಗಳತ್ತ ಹೋಗುವ ಯುವಕರಿಗೆ ದೇಶಸೇವೆಯತ್ತ ತರುವಲ್ಲಿ ಪ್ರಮುಖ ಪಾತ್ರ, ನಾಲ್ಕು ವರ್ಷಗಳ ಸೇವೆಯ ನಂತರ ಅತ್ಯುತ್ತಮ ಎಂದು ಕರೆಸಿಕೊಳ್ಳುವ ಅಗ್ನಿ ವೀರರಿಗೆ ಸೇನೆಯಲ್ಲಿ ಖಾಯಂ ಸ್ಥಾನ, ಈಗಾಗಲೇ ಅನೇಕ ದೇಶಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದ್ದು ಯುವಕರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಹಾಗೂ ಈ ಯೋಜನೆಯಿಂದ ದೇಶದಲ್ಲಿ ಅತೀ ಹೆಚ್ಚು ಸೈನಿಕರ ಪಡೆ ನಿರ್ಮಾಣವಾಗುತ್ತದೆ ಮತ್ತು ಇದು ಭಾರತದ ಸೇನೆಗೆ ಹೆಮ್ಮೆಯ ವಿಷಯವಾಗಿದ್ದು ಈ ಬಗ್ಗೆ ಪ್ರಜ್ಙಾವಂತ ನಾಗರಿಕರು ಅಗ್ನಿಪಥ ಯೋಜನೆಯನ್ನು ಪ್ರೋತ್ಸಾಹಿಸಿ ಯುವಕರು ಅಗ್ನಿ ವೀರರಾಗುವಂತೆ ಪ್ರೇರೇಪಿಸಿ ದೇಶ ಸೇವೆಯಲ್ಲಿ ನಾವು ಕೂಡ ಭಾಗಿಯಾಗೋಣ ಎಂದು ತಿಳಿಸಿದ್ದಾರೆ.