ಉಡುಪಿ\ ಕಾರ್ಕಳ, ಜೂ 18 (DaijiworldNews/HR): ಬಹು ನಿರೀಕ್ಷಿತ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿಯ ಭವ್ಯ ನಾಯಕ್ ರಾಜ್ಯಕ್ಕೆ ದ್ವಿತೀಯ ಹಾಗೂ ಕಾರ್ಕಳದ ಅದ್ವೈತ್ ಶರ್ಮ ರಾಜ್ಯಕ್ಕೆ ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.
ಹಪ್ಪಳ ಮಾರಾಟ ಮಾಡುವವರ ಪುತ್ರಿಯಾಗಿರುವ ಭವ್ಯ ನಾಯಕ್ ಅವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಅವರಿಗೆ ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 597 ಅಂಕ ಪಡೆದುಕೊಂಡಿದ್ದಾರೆ.
ಉಡುಪಿಯ ಪುತ್ತೂರಿನ ನಿವಾಸಿ ನಾರಾಯಣ ಉಮಾ ನಾಯಕ್ ದಂಪತಿ ಪುತ್ರಿ ಭವ್ಯ ಸಿಇಟಿ ಬರೆದಿದ್ದು, ಭವಿಷ್ಯದಲ್ಲಿ ಇಂಜಿನಿಯರ್ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿರುವ ಅದ್ವೈತ್ ಶರ್ಮ ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.
ಇವರು ದುರ್ಗ ಗ್ರಾಮದ ತೆಳ್ಳಾರು ಬಲಾಜೆಯ ಶ್ರೀನಿವಾಸ ಭಟ್ ಹಾಗೂ ಶಾಲಿನಿ ದಂಪತಿಯ ಪುತ್ರ ಅದ್ವೈತ್ ಶರ್ಮ ಪ್ರಸಕ್ತ ಸಾಳಿನ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 596 ಅಂಕಗಳಿಸಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇವರು ಮೂಲತಃ ಕಾಸರಗೋಡು ಕುಂಬಳೆ ಸಮೀಪದ ಬದಿಯಡ್ಕದ ಸರ್ಪನಡ್ಕದವರಾಗಿದ್ದಾರೆ. ಪಿಯು ತರಗತಿಯ ಆರಂಭದಲ್ಲಿಯೇ ಓದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇನೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರತ್ತಿದೆ. ಹೆತ್ತವರು ಹಾಗೂ ಶಿಕ್ಷಕರ ಪ್ರೇರಣೆಯಿಂದ ಯಶಸ್ಸು ಕಂಡಿದ್ದೇನೆ. ಪಿಯು ಫಲಿತಾಂಶದಿಂದ ಖುಷಿ ಕಂಡಿದ್ದೇನೆ. ಮುಂದೆ ಜೆಇಇ ಪರೀಕ್ಷೆ ಬರೆಯಬೇಕು. ಅದರಲ್ಲಿ ಫಲಿತಾಂಶ ಬಂದ ಬಳಿಕ ಮುಂದಿನ ಶಿಕ್ಷಣ ಕುರಿತು ಚಿಂತನೆಕೈಗೊಳ್ಳುತ್ತೇನೆ ಎಂದು ಅದ್ವೈತ್ ಶರ್ಮ ಹೇಳಿದ್ದಾರೆ.