ಪಡುಬಿದ್ರಿ: ಜೂ 18 (DaijiworldNews/MS): ’ನೋಟಿನ , ಥಮ್ಸ್ ಅಪ್ ’ ಇಮೋಜಿಯಿಂದ ಅಪಾರ್ಥವಾಗಿ ’ಬರ್ತೀಯಾ ’ಎಂದು ಕೇಳಿದ ಯುವಕನೋರ್ವನ ವಿರುದ್ದ ದೂರು ದಾಖಲಾದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಂಚಿನಡ್ಡ ಪರಿಸರದ ಕೂಲಿ ಕಾರ್ಮಿಕ ಮಹಿಳೆಯೋರ್ವರೊಂದಿಗೆ ಸ್ಮಾರ್ಟ್ ಪೋನ್ ಸ್ಟೇಟನ್ ನಲ್ಲಿನ ಸಂಜ್ಞಾ ಸಂವಾದ ಕುರಿತಾಗಿ ಉಂಟಾದ ತಪ್ಪು ಕಲ್ಪನೆಯಿಂದ ಅಕೆಯ ಪೋನ್ ಕರೆ ಮಾಡಿ ಬರ್ತೀಯಾ ಎಂದು ಕೇಳಿದ ಕಂಚಿನಡ್ಕದ ಆರೋಪಿ ನಿಕೇಶ (27) ಮಹಿಳೆಯ ನಕಾರಾತ್ಮಕ ಉತ್ತರಕ್ಕೆ ಕೋಪಕೊಂಡು ಆಕೆಗೆ ಬೈದು ಜೀವ ಬೆದರಿಕೆಯೊಡ್ಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ
ಕಳೆದ ಮಂಗಳವಾರ ಮೊಬೈಲ್ ನಲ್ಲಿ 500ರೂ. ನೋಟಿನ ಚಿತ್ರವನ್ನು ಮಹಿಳೆಗೆ ರವಾನಿಸಿದ್ದ ಆರೋಪಿಯು ಸಂಜ್ಞಾ ಸಂದೇಶದ ಅರ್ಥವನ್ನು ಅರಿಯದೇ ಹಾನಗಲ್ ತಾಲೂಕಿನ ಕೂಲಿ ಕಾರ್ಮಿಕ ಮಹಿಳೆ ಏನಿದು ? ಎಂಬ ಅರ್ಥದಲ್ಲಿ ಥಮ್ಸ್ ಅಪ್ ಕಳುಹಿಸಿದ್ದರು. ಆರೋಪಿಯೂ ಇದಕ್ಕೆ "ಓಕೆ" ಎಂದು ಉತ್ತರಿಸಿ ಮಹಿಳೆಗೆ ಕರೆ ಮಾಡಿದ್ದ.
ಆ ಕರೆಯ ಅರ್ಧದಲ್ಲಿ ಸಮೀಪದಲ್ಲಿದಲ್ಲಿದ್ದ ಇನ್ನೋರ್ವ ವ್ಯಕ್ತಿ ಆರೋಪಿ ನಿಕೇಶನಿಗೆ ಉತ್ತರಿಸಿದ್ದರು. ಇದಕ್ಕೆ ಕೋಪಗೊಂಡಿದ್ದ ಆರೋಪಿಯು ಮಹಿಳೆಯನ್ನು ಅಡ್ಡಗಟ್ಟಿ ಬೈದು ಪೊಲೀಸರಿಗೆ ತಿಳಿಸಿದ್ದಲ್ಲಿ ಪರಿಣಾಮ ನೆಟ್ಟಗಿರದು ಎಂದು ಜೀವ ಬೆದರಿಕೆಯನ್ನೂ ಒಡ್ಡಿರುವುದಾಗಿ ಪೊಲೀಸರಿಗಿತ್ತ ದೂರಿನಲ್ಲಿ ತಿಳಿಸಲಾಗಿದೆ.