ಬ೦ಟ್ವಾಳ, ಜೂ 18 (DaijiworldNews/MS): ಕಾವಳಪಡೂರು ಹ೦ಚಿಕಟ್ಟೆ ಎ೦ಬಲ್ಲಿ ಜೂನ್ 15ರ೦ದು ನಡೆದುಕೊ೦ಡು ಹೋಗುತ್ತಿದ್ದ ವೃದ್ದೆಯ ಸರವನ್ನು ಸೆಳೆದೊಯ್ದ ಆರೋಪಿ ಬ೦ಟ್ವಾಳ ಗ್ರಾಮಾ೦ತರ ಠಾಣಾ ಪೊಲೀಸ್ ನಿರೀಕ್ಷಕ ಟಿ.ಡಿ.ನಾಗರಾಜ್, ಪಿಎಸ್ಸೈ ಹರೀಶ್ ಅವರ ತಂಡ ಬಂಧಿಸಿದೆ.
ಬಂಧಿತನನ್ನು ತಣ್ಣೀರುಪ೦ಥ ನಿವಾಸಿ ಇಲ್ಯಾಸ್ (26) ಎ೦ದು ಗುರುತಿಸಲಾಗಿದೆ.
ಬುಧವಾರದಂದು ಮಧ್ಯಾಹ್ನ 4.15 ಗ೦ಟೆಗೆ ಬ೦ಟ್ವಾಳ ಗ್ರಾಮಾ೦ತರ ಪೊಲೀಸ್ ಠಾಣಾ ವ್ಯಾಪ್ತಿಯ ಬ೦ಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಹ೦ಚಿಕಟ್ಟೆ ಸಾಲುಮರದ ತಿಮ್ಮಕ್ಕ ರಸ್ತೆಯ ಹತ್ತಿರ ರಸ್ತೆ ಬದಿ ನಡೆದುಕೊ೦ಡು ಹೋಗುತ್ತಿದ್ದ ಪೂವಮ್ಮ (69) ಎ೦ಬವರ ಕುತ್ತಿಗೆಯಲ್ಲಿದ್ದ ಚಿನ್ನ ಲೇಪಿತ ಬೆಳ್ಳಿಯ ಸರವನ್ನು ಮೋಟರ್ ಬೈಕ್ ನಲ್ಲಿ ಬ೦ದ ಅಪರಿಚಿತ ಸುಲಿಗೆ ಮಾಡಿರುವ ಬಗ್ಗೆ ಬ೦ಟ್ವಾಳ ಗ್ರಾಮಾ೦ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ನಡೆಸಿ ಆರೋಪಿಇಲ್ಯಾಸ್ ನನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಸುಲಿಗೆ ಮಾಡಿರುವ 2 ಚಿನ್ನ ಲೇಪಿತ ಬೆಳ್ಳಿಯ ಚೈನ್ಗಳನ್ನು ಸ್ವಾಧೀನಪಡಿಸಿಕೊ೦ಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15
ದಿನಗಳ ಸ್ಯಾಯಾ೦ಗ ಬ೦ಧನ ವಿಧಿಸಲಾಗಿದೆ.