ಮಂಗಳೂರು, ಜೂ 16 (DaijiworldNews/SM): ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ಈ ಹಿಂದೆ ನಡೆದಿರುವುದೆಲ್ಲವು ನಾಟಕವೆಂದು ಶಾಸಕ ಭರತ್ ಶೆಟ್ಟಿ ಹೇಳಿಕೆ ನೀಡಿದ್ದು, ಶಾಸಕರಿಗೆ ಮುನೀರ್ ಕಾಟಿಪಳ್ಳ ಸವಾಲು ಹಾಕಿದ್ದಾರೆ.
ಶಾಸಕ ಭರತ್ ಶೆಟ್ಟಿಗೆ ಮುನೀರ್ ಕಾಟಿಪಳ್ಳ ತಿರುಗೇಟು ನೀಡಿದ್ದು, ಶಾಸಕರು ದಾಖಲೆ ಬಿಡುಗಡೆಗೊಳಿಸಿ ಮಾತನಾಡಲಿ ಎಂದಿದ್ದಾರೆ. ಯಾರು ಹಣ ಪಡೆದಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿ. ಹಣ ಪಡೆದಿದ್ದೇ ಆದಲ್ಲಿ ತನಿಖೆ ನಡೆಸಿ ಅವರನ್ನು ಜೈಲಿಗೆ ಅಟ್ಟಲಿ ಎಂಬುವುದಾಗಿ ಶಾಸಕ ಭರತ್ ಶೆಟ್ಟಿಗೆ ಮುನೀರ್ ಕಾಟಿಪಳ್ಳ ಸವಾಲೆಸೆದಿದ್ದಾರೆ.
ಸುರತ್ಕಲ್ ಟೋಲ್ಗೇಟ್ ತೆರವು ಮಾಡಲೇಬೇಕು. ಟೋಲ್ ರದ್ಧತಿಗೆ ನಾನು ಗಡ್ಕರಿಗೆ ಪತ್ರ ಬರೆದಿದ್ದೇನೆ. ಇದುವರೆಗೆ ನಡೆದ ಟೋಲ್ಗೇಟ್ ಹೋರಾಟಗಳು ಕಮೀಷನ್ಗಾಗಿ ನಡೆದಿದೆ. ಇದುವರೆಗಿನ ಟೋಲ್ ಹೋರಾಟ ರಾಜಕೀಯ ಕಾರಣಕ್ಕಾಗಿ ನಡೆದಿದೆ ಎಂದು ಈ ಹಿಂದೆ ಸುದ್ದಿಗೋಷ್ಥಿಯಲ್ಲಿ ಶಾಸಕ ಭರತ್ ಶೆಟ್ಟಿ ಆರೋಪ ಮಾಡಿದ್ದರು.