ಮಂಗಳೂರು, ಜೂ 16 (DaijiworldNews/SM): ಶ್ರೀ ನಾರಾಯಣ ಗುರುಗಳ ಪಠ್ಯ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಹೇಳಿಕೆ ನೀಡಿದ್ದು, ಸರಕಾರ ಕನಿಷ್ಠ ಪೂರಕ ಪಠ್ಯ ಪುಸ್ತಕ ತಯಾರಿಸಿ ವಿದ್ಯಾರ್ಥಿಗಳಿಗೆ ವಿತರಿಸಲಿ ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀ ನಾರಾಯಣ ಗುರುಗಳ ಬಗ್ಗೆ ಪೂರಕ ಪಠ್ಯ ತಯಾರಿಸಿ ವಿತರಿಸಬೇಕು. ಸರಕಾರ ಆದಷ್ಟು ಶಿಘ್ರದಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಎಸ್ ಎಸ್ ಎಲ್ ಸಿಯ ಎಲ್ಲಾ ವಿದ್ಯಾರ್ಥಿಗಳು ಶ್ರೀ ನಾರಾಯಣ ಗುರುಗಳಾ ಬಗ್ಗೆ ಕಲಿಯುವಂತಾಗಲಿ. ಈ ಕೆಲಸ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಂದ ಆಗಬೇಕಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಗೌರವವಿದ್ರೆ ಈ ಕೆಲಸವಾಗಲಿ ಎಂದು ಒತ್ತಾಯಿಸಿದ್ದಾರೆ.
ನಾವು ಮುಖ್ಯಮಂತ್ರಿಗಳ ಮಾತು ಗೌರವಿಸುತ್ತೆವೆ. ನಿಮಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಗೌರವ ಇಲ್ಲವೇ? ನಾವು ಸರಕಾರ ಎಲ್ಲಾ ನಡೆಗಳನ್ನು ಗಮನಿಸುತ್ತಿದ್ದೇವೆ ಎಂದು ಪದ್ಮರಾಜ್ ಹೇಳಿದ್ದಾರೆ.