ಉಡುಪಿ, ಜೂ 16 (DaijiworldNews/MS): ಪರ್ಕಳದ ದೇವಿ ನಗರ ಒಂದು ಹಾಗೂ ಎರಡನೇ ಕ್ರಾಸ್ ನಲ್ಲಿ ಇರುವ ಹೆಚ್ಚಿನ ಮನೆಗಳಲ್ಲಿ ಮಳೆ ಮತ್ತೆ ಆಫ್ರಿಕನ್ ತಳಿಯಬಸವನ ಹುಳುಗಳು ಕಾಣಿಸಿಕೊಂಡಿದ್ದು. ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಯಾಗಿದೆ. ಪರ್ಕಳದ ಸಮೀಪ ಮುಂದುವರಿದು ಇದೀಗ ಪರ್ಕಳ ಬಿಎಂ ಸ್ಕೂಲ್ ನ ಪಾಗರ, ಪುಟಾಣಿಗಳ ಅಂಗನವಾಡಿಯ ಗೋಡೆಗಳ ಮೇಲೆ ಹಾಗೂ ಪರ್ಕಳ ದೇವಿ ನಗರದ ಅಬ್ದುಲ್ ಸತ್ತಾರ್ ಅವರ ಮನೆಯ ಕಂಪೌಂಡ್ ಸುತ್ತಲೂ ಆಫ್ರಿಕನ್ ಮಾದರಿಯ ಬಸವನ ಹುಳು ಬಾದೆ ಕಂಡು ಬಂದಿದೆ.
ಅಬ್ದುಲ್ ಸತ್ತಾರ್ ಅವರು ಹೇಳುವ ಪ್ರಕಾರ "ಕಳೆದ ವರ್ಷ ನಾವು 9 ಗೋಣಿ ಕಲ್ಲು ಉಪ್ಪು ಬಳಸಿದ್ದೇವೆ ಆದರೂ ಕೂಡ ಈ ಹುಳ ಉಪಟಳ ಕೊನೆಗೊಂಡಿಲ್ಲ. ಈ ವರ್ಷ ಮಳೆ ಆರಂಭವಾದಾಗ. ನಮ್ಮ ಮನೆಯ ಗೋಡೆಯಲ್ಲಿ ಹರಡುತ್ತಿದ್ದು ಕಂಡುಬಂದಿದೆ ಮನೆಯ ಗಿಡಗಂಟೆಗಳನ್ನು ತಿನ್ನಲು ಶುರು ಮಾಡಿದೆ ಈ ಪರಿಸರದಲ್ಲಿ ಮತ್ತೆ ಮತ್ತೆ ಈ ಬಸವನ ಹುಳುವಿನಿಂದ ತೊಂದರೆಯಾಗುತ್ತಿದ್ದು. ಕಳೆದ ವರ್ಷ ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ. ಇರುವುದರಿಂದ ಈ ಬಾರಿ ಮತ್ತೆ ಹುಳ ಉಪಟಳದಿಂದ ಸಾರ್ವಜನಿಕರೆಲ್ಲರೂ ತೊಂದರೆ ಅನುಭವಿಸಬೇಕಾಗಿದೆ. ಇದೀಗ ಪರ್ಕಳ ಬಿಎಂ ಶಾಲೆಯ ಹಾಗೂ ಅಂಗನವಾಡಿಯ ಗೋಡೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
ಈ ಹುಳವು ಸುರಿಸುವ ಎಂಜಲು ಬಲು ವಾಸನೆಯುಕ್ತವಾಗಿದ್ದು ಪರಿಸರ ಎಲ್ಲಾ ವಾಸನೆಯಿಂದ ಕೂಡಿರುತ್ತದೆ. ಮಳೆಬಂದಾಗ ಇದು ಭೂಮಿಯ ಮೇಲೆ ಸಂಚರಿಸುತ್ತದೆ. ರಾತ್ರಿ ಹೊತ್ತು ಸಂಚಾರ ಜಾಸ್ತಿಯಾಗಿರುತ್ತದೆ. ಮನೆಯ ಒಳಗೆ ಕೂಡಾ ಇವುಗಳು ಕಾಣಸಿಗುತ್ತಿವೆ. ಉಡುಪಿಯ ನಗರಸಭೆಯ ಆರೋಗ್ಯ ಅಧಿಕಾರಿಗಳು. ಈ ಹುಳು ಬಾಧೆಗೆ ಕೀಟನಾಶಕವನ್ನು ಸಿಂಪಡಿಸಿ. ಪೂರ್ಣಪ್ರಮಾಣದ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರು ಗಳಾದ ಗಣೇಶ್ ರಾಜ್ ಸರಳೇಬೆಟ್ಟು, ಹಾಗೂ ರಾಜೇಶ್ ಪ್ರಭು ಪರ್ಕಳ ಆಗ್ರಹಿಸಿದ್ದಾರೆ.