ಮಂಗಳೂರು, ಜೂ 16 (DaijiworldNews/MS) : ಆಂತರಿಕ ಭದ್ರತಾ ವಿಭಾಗದ ಅಡಿಯಲ್ಲಿ (ಐಎಸ್ ಡಿ) ನಗರ ಭಯೋತ್ಪಾದನಾ ನಿಗ್ರಹ ದಳವು ನಗರ ಮತ್ತು ಕಮಿಷನರೇಟ್ನ ಮಿತಿಗಳಲ್ಲಿ ಸೇವೆ ಸಲ್ಲಿಸಲು ಸಿದ್ಧವಾಗಿದ್ದು , ಇದಕ್ಕೂ ಮುನ್ನ ಜೂನ್ 16 ಗುರುವಾರ ಪೊಲೀಸ್ ಮೈದಾನದಲ್ಲಿ ತಂಡವು ಅಣಕು ಪ್ರದರ್ಶನ ನಡೆಸಿತು.
ಈ ತಂಡದಲ್ಲಿ 35 ಪೊಲೀಸ್ ಸಿಬ್ಬಂದಿಯನ್ನು ಹೊಂದಿದೆ. ಬೆಂಗಳೂರಿನ ಕೂಡ್ಲುವಿನಲ್ಲಿರುವ ಭಯೋತ್ಪಾದನೆ ನಿಗ್ರಹ ಕೇಂದ್ರದಲ್ಲಿ (ಸಿಸಿಟಿ) ತಂಡ ಎರಡು ತಿಂಗಳ ತರಬೇತಿ ಪಡೆದು ನಗರಕ್ಕೆ ಆಗಮಿಸಿದೆ.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, '30 ಸದಸ್ಯರ ಸಿಸಿಟಿ ತಂಡವು ದೈಹಿಕ ಮತ್ತು ಮಾನಸಿಕ ಸದೃಢತೆ ಹಾಗೂ ಕೌಶಲ್ಯ ತರಬೇತಿಯೊಂದಿಗೆ ಎರಡು ತಿಂಗಳ ಅವಧಿಯಲ್ಲಿ ತರಬೇತಿಯನ್ನು ಪಡೆದುಕೊಂಡಿದೆ. ಎರಡು ತಿಂಗಳ ತರಬೇತಿಯಲ್ಲಿ ವಿಚಾರಣೆ, ವ್ಯಕ್ತಿಗಳನ್ನು ಅಪಹರಿಸಿ, ಒತ್ತೆಯಾಗಿಟ್ಟುಕೊಂಡಾಗ ಹೇಗೆ ಕಾರ್ಯಾಚರಿಸುವುದು ,
ಸಾಮಾಜಿಕ ವಿರೋಧಿ ಅಂಶಗಳನ್ನು ಎದುರಿಸಲು ವಿಶೇಷ ಸಂದರ್ಭಗಳಲ್ಲಿ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವುದು ಹೇಗೆ ಮುಂತಾದ ತರಬೇತಿ ಪಡೆದುಕೊಂಡಿದೆ .ಇದರೊಂದಿಗೆ ವರುಣ್ ವಾಟರ್ ಕ್ಯಾನನ್ ವಾಹನವನ್ನು ನಗರ ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತದೆ, ಇದರಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದು ಕಾರ್ಯಾಚರಣೆ ಸಂದರ್ಭ ಬಳಸಲಾಗುತ್ತದೆ ಎಂದರು