ಬೆಳ್ತಂಗಡಿ, ಜೂ 16 (DaijiworldNews/HR): ಅತ್ತೆಯ ಕಿರುಕುಳದಿಂದ ಮನನೊಂದು ಎರಡು ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಧರ್ಮಸ್ಥಳ ಪೊಲೀಸರು ಪಾರು ಮಾಡಿದ್ದಾರೆ.
ಮಡಿಕೇರಿಯ ಶುಂಠಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೊನಿ ಮಹಿಳೆ ಮನೆಯಲ್ಲಿ ಅತ್ತೆಯ ಕಿರುಕುಳದಿಂದ ಬೇಸತ್ತಿದ್ದರು. ಜೂನ್ 14ರಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮಗುವಿನ ಜೊತೆ ಮನೆ ಬಿಟ್ಟಿದ್ದ ಮಹಿಳೆ ಸಂಜೆಯಾದರು ಮನೆಗೆ ಹಿಂತಿರುಗಿ ಬರಲಿಲ್ಲ. ಅನುಮಾನ ಬಂದ ಕುಟುಂಬಸ್ಥರ ಮಹಿಳೆಯ ಪತ್ತೆಗಾಗಿ ಶುಂಠಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿ ಸ್ನೇಹಿತರಿಗೆ ಮಾಹಿತಿ ನೀಡಿದ್ದರು.
ಇನ್ನು ಧರ್ಮಸ್ಥಳದ ನೇತ್ರಾವತಿ ನದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಏನಾದರೂ ಹೋಗಿರುವ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು ಸ್ನೇಹಿತನ ಸಹಕಾರದ ಜೊತೆ ಧರ್ಮಸ್ಥಳ ಪೋಲಿಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮಡಿಕೇರಿಯಿಂದ ಬರುವ ಬಸ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ವರದಿಗಾರ ಸುದೀಪ್ ಅವರ ಸಹಾಯದಿಂದ ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ ನಲ್ಲಿ ಮಗುವಿನ ಜೊತೆ ಮಹಿಳೆಯನ್ನ ಕಂಡು ಪೊಲೀಸ್ ಠಾಣೆಗೆ ಕರೆದೊಯ್ಯುದು ಮಹಿಳೆಯನ್ನ ವಿಚಾರಣೆ ನಡೆಸಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಮಗು ಮತ್ತು ತಾಯಿಯನ್ನ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಇನ್ನೂ ವಿಚಾರಣೆಯಲ್ಲಿ ಅತ್ತೆಯ ಕಿರುಕುಳದಿಂದ ಆತ್ಮಹತ್ಯೆ ಯತ್ನಿಸಿರುವ ವಿಷಯವನ್ನ ಸ್ವತಃ ಮಹಿಳೆ ಬಾಯಿಬಿಟ್ಟಿದ್ದಾಳೆ. ಧರ್ಮಸ್ಥಳ ಪೊಲೀಸ್ ಠಾಣೆಯ ಪಿ ಎಸ್ ಐ ಕೃಷ್ಣಕಾಂತ ಪಾಟೀಲ್, ಕಾನ್ಸ್ಟೇಬಲ್ ಶೇಷಣ್ಣ ಈ ಕಾರ್ಯಚರಣೆ ಭಾಗಿಯಾದ ಅಧಿಕಾರಿಗಳು.