ಮಂಗಳೂರು, ಜೂ 15 (DaijiworldNews/MS): ಹಿಂಸಾಚಾರ ಖಂಡಿಸಿ ವಿಶ್ವ ಹಿ೦ದು ಪರಿಷತ್,ಬಜರಂಗದಳ ಕಾರ್ಯಕರ್ತ ಕರೆ ನೀಡಿರುವ ಪ್ರತಿಭಟನೆ ಅವಕಾಶ ನೀಡುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರವಾದಿಯವರ ವಿರುದ್ದ ಅವಹೇಳನಕಾರಿಯಾಗಿ ಹೇಳಿಕೆ ನೆಪದಲ್ಲಿ ದೇಶಾದ್ಯಂತ ಹಿಂಸಾಚಾರ ನಡೆಸಿರುವುದನ್ನು ಖಂಡಿಸಿ ವಿಶ್ವ ಹಿ೦ದು ಪರಿಷತ್,ಬಜರಂಗದಳ ಕಾರ್ಯಕರ್ತರು ಮಂಗಳೂರಿನ ಪಿವಿಎಸ್ ವೃತ್ತದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ಕಮಿಷನರ್ ಯಾವುದೇ ಪ್ರತಿಭಟನೆಗೂ ಅವಕಾಶ ನೀಡುವುದಿಲ್ಲಎಂದು ಹೇಳಿದ್ದಾರೆ.
ಜೂನ್ 16ರಂದು ಮಧ್ಯಾಹ್ನ 3 ಗಂಟೆಗೆ ಪ್ರತಿಭಟನಾ ಸಭೆ ನಡೆಸುವ ಬಗ್ಗೆ ಜಾಲತಾಣದಲ್ಲಿ ಮಾಹಿತಿ ಪ್ರಸಾರವಾಗುತ್ತಿರುವುದುಕಂಡುಬಂದಿದೆ. ಆದರೆ ಈ ಕುರಿತು ಪೊಲೀಸ್ ಇಲಾಖೆಗೆ ಅಧಿಕೃತವಾಗಿ ಅನುಮತಿ ಕೋರಿಕೆ ಪತ್ರವನ್ನು ಸಲ್ಲಿಸಿರುವುದಿಲ್ಲ ಆದಾಗ್ಯೂ ಹಾಲಿಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಭದ್ರತೆ ದೃಷ್ಟಿಯಿಂದ ಯಾವುದೇ ರೀತಿಯ ಪ್ರತಿಭಟನೆ ನಡೆಸಲು ಅನುಮತಿ ನೀಡುವುದಿಲ್ಲಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.