ಶಬರಿಮಲೆ, ಜ 14(SM): ಸಂಕ್ರಾಂತಿಯ ದಿನವಾದ ಸೋಮವಾರದಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಭಕ್ತಸಾಗರ ಜ್ಯೋತಿಯ ದರ್ಶನ ಮಾಡಿ ಪುಣೀತರಾಗಿದ್ದಾರೆ. ಮಕರವಿಳ್ಳಕ್ಕು (ಮಕರ ಜ್ಯೋತಿ) ದರ್ಶನ ಮಾಡಲು ಲಕ್ಷಾಂತರ ಜನ ಭಕ್ತಾದಿಗಳು ಶಬರಿಮಲೆಯಲ್ಲಿ ಸೇರಿದ್ದರು.
ಪೊನ್ನಂಬಲ ಬೇಡು ಬೆಟ್ಟದ ಮೇಲೆ ಜ್ಯೋತಿಯು ಮಿಂಚಿ ಭಕ್ತರಿಗೆ ದರ್ಶನ ನೀಡಿತು. ಸಂಪ್ರದಾಯದಂತೆ ಮಂಡಲ ಪೂಜೆ ಆದ ನಂತರ ಸಂಜೆ 6:40 ಕ್ಕೆ ಬೆಟ್ಟದ ಮೇಲೆ ಮಕರ ಜ್ಯೋತಿ ದರ್ಶನವಾಯಿತು. ದರ್ಶನವಾದ ಕೂಡಲೇ ಭಕ್ತಾದಿಗಳು 'ಸ್ವಾಮಿ ಶರಣಂ ಅಯ್ಯಪ್ಪ' ಉದ್ಘಾಷಗಳನ್ನು ಕೂಗಿದರು. ಹಾಗೂ ಜ್ಯೋತಿಗೆ ಕೈ ಮುಗಿದರು. ಮಕರ ಜ್ಯೋತಿಯನ್ನು ಅಯ್ಯಪ್ಪನ ಪ್ರತಿರೂಪ ಎಂದೇ ನಂಬಲಾಗುತ್ತದೆ.
ಸಂಕ್ರಾಂತಿಯಂದು ಗೋಚರಿಸುವ ಮಕರ ಜ್ಯೋತಿಯನ್ನು ನೋಡಲು ದೇಶದ ವಿವಿದ ರಾಜ್ಯಗಳಿಂದ ಭಕ್ತಾದಿಗಳು ಲಕ್ಷಾಂತರ ಜನಸಂಖ್ಯೆಯಲ್ಲಿ ಶಬರಿಮಲೆಗೆ ತೆರಳುತ್ತಾರೆ. ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರಿಂ ತೀರ್ಪು ಬಂದ ನಂತರದ ಮೊದಲ ಬಾರಿಗೆ ಭಕ್ತರಿಗೆ ಮಕರ ಜ್ಯೋತಿ ದರ್ಶನವಾಗಿದೆ.
ಪೊಲೀಸರ ಬಿಗು ಭದ್ರತಾ ವ್ಯವಸ್ಥೆ ಕೈಗೊಂಡ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರಗಳಾಗಿಲ್ಲ.