ಉಡುಪಿ, ಜೂ 14 (DaijiworldNews/MS): ಬ್ರಹ್ಮಕಲಶೋತ್ಸವ ವೈಭವದಿಂದ ಸಂಪನ್ನಗೊಂಡ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಾಲಯಕ್ಕೆ ಇಂದು ಕೇಂದ್ರ ರೈತರ ಕಲ್ಯಾಣ ಮತ್ತು ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
ದೇಗುಲದ ಕಾಮಗಾರಿ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ ಸಚಿವೆ ಕಡಿಯಾಳಿ ಮಹಿಷಮರ್ದಿನಿ ದೇಗುಲದ ಶಿಲ್ಪಕಲೆ , ತಿರುಗುವ ಮುಚ್ಚಿಗೆ, ಕಾಷ್ಟಶಿಲ್ಪ ಮತ್ತು ಕರಸೇವಕರ ಮೂಲಕ ದೇಗುಲದ ತಳಪಾಯ ಮತ್ತು ನಿರಂತರ ಶಿಸ್ತುಬದ್ಧ ಸ್ವಯಂಸೇವಕರ ಪಡೆ ಕೇವಲ ರಾಜ್ಯ ಮಾತ್ರವಲ್ಲದೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಈ ರೀತಿಯ ಭವ್ಯ ದೇಗುಲ ಗ್ರಾಮಸ್ಥರು ಮತ್ತು ದೇವರ ಪರಮ ಭಕ್ತರು ಸೇರಿ ಕಟ್ಟಿ ಭಗವಂತನಿಗೆ ಸಮರ್ಪಣೆ ಮಾಡಿರುವುದು ಸರ್ವರಿಗೂ ಜಗನ್ಮಾತೆ ಮಹಿಷಮರ್ದಿನಿ ಸನ್ಮಂಗಲ ಉಂಟು ಮಾಡಲಿ ಎಂದು ಹೇಳಿದರು. ತಾನು ಕೂಡ ಈ ಕರಸೇವೆಯಲ್ಲಿ ಸ್ವಯಂಸೇವಕಿಯಾಗಿ ಭಾಗವಹಿಸಿರುವುದು ತನ್ನ ಭಾಗ್ಯ ಎಂದು ಅವರು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ದೇವ ಸೇವೆ ಸಮಾಜ ಸೇವೆ ಎಂಬ ವಿಶಿಷ್ಟ ಪರಿಕಲ್ಪನೆಯಲ್ಲಿ ಪ್ರಚಾರಕ್ಕೆ ಬಳಸಿದ ಕೊಡೆಯನ್ನು ಉಡುಪಿ ನಿವಾಸಿ ಶರ್ವಾಣಿಯವರಿಗೆ ಹಸ್ತಾಂತರಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ,ರಾಘವೇಂದ್ರ ಕಿಣಿ ದೇವಳದ ಕಾಮಗಾರಿಯ ವಿವರಣೆ ನೀಡಿದರು ದೇವಳದ ಪ್ರಧಾನ ಅರ್ಚಕ ಕೆ ರಾಧಾಕೃಷ್ಣ ಉಪಾಧ್ಯಾಯ, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಸಂಧ್ಯಾ ಪ್ರಭು, ಶಶಿಕಲಾ ಭರತ್, ಮಂಜುನಾಥ್ ಹೆಬ್ಬಾರ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಸಂಧ್ಯಾ ರಮೇಶ್ ನಗರಸಭಾ ಸದಸ್ಯರಾದ ಶ್ರೀಮತಿ ಗೀತಾ ಶೇಟ್,ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಭಾರತಿ ಚಂದ್ರಶೇಖರ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಸುಜಾತ ಸತೀಶ್ , ಚೇತನಾ ಚಂದ್ರಶೇಖರ್ ಪ್ರಭು, ಸಾಮಾಜಿಕ ಧುರೀಣ ಪ್ರದೀಪ್ ರಾವ್,ದೇವಸ್ಥಾನದ ಅಧಿಕಾರಿ ಗಂಗಾಧರ ಹೆಗ್ಡೆ ಉಪಸ್ಥಿತರಿದ್ದರು