ಉಡುಪಿ, ಜೂ 12 (DaijiworldNews/HR): ಕಸ್ತೂರ್ಬಾ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಗುಣಮಟ್ಟ ನಿರ್ವಹಣೆಯ ಪ್ರತಿನಿಧಿ ಡಾ. ಬ್ರಯಾಲ್ ಡಿಸೋಜಾ ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಿಂದ ತಮ್ಮ ಪ್ರಬಂಧಕ್ಕಾಗಿ ಪಿಎಚ್ಡಿ ಪದವಿ ಪಡೆದಿದ್ದಾರೆ.
ಡಾ. ಬ್ರಯಾಲ್ ಡಿಸೋಜಾ ಅವರು ಪ್ರಸ್ತುತ ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಗುಣಮಟ್ಟ ನಿರ್ವಹಣಾ ಪ್ರತಿನಿಧಿಯಾಗಿ ಕಸ್ತೂರಬಾ ಆಸ್ಪತ್ರೆ ಮಣಿಪಾಲದ ಪ್ರತಿನಿಧಿಯಾಗಿದ್ದಾರೆ.
"ರೋಗಿಗಳ ಫಲಿತಾಂಶದ ಮೇಲೆ ಮಾಡ್ಯುಲರ್ ಶೈಕ್ಷಣಿಕ ಹಸ್ತಕ್ಷೇಪದ ಪರಿಣಾಮಕಾರಿತ್ವದ ಮೆಂಟೆನೆನ್ಸ್ ಹಿಮೋಡಯಾಲಿಸಿಸ್ ಪೇಷಂಟ್ಸ್ ಆಫ್ ಕೋಸ್ಟಲ್ ಕರ್ನಾಟಕ – ಎ ರಾಂಡೋಮೈಸ್ಡ್ ಕಂಟ್ರೋಲ್ ಟ್ರಯಲ್" ಕುರಿತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಲ್ಲಿಸಿದ್ದ ತಮ್ಮ ಪ್ರಬಂಧಕ್ಕಾಗಿ ಪಿಎಚ್ಡಿ ಪಡೆದಿದ್ದಾರೆ.
ಇನ್ನು ತಮ್ಮ ಪ್ರಬಂಧಕ್ಕಾಗಿ ಪಿಎಚ್ಡಿಯನ್ನು ಡಾ. ಬಿ .ಉನ್ನಿಕೃಷ್ಣನ್, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಮತ್ತು ಡಾ. ರವೀಂದ್ರ ಪ್ರಭು, ಪ್ರೊಫೆಸರ್ ಮತ್ತು ಯುನಿಟ್ ಹೆಡ್ ಆಫ್ ನೆಫ್ರಾಲಜಿ ಕೆಎಂಸಿ ಮಣಿಪಾಲ ಅವರ ಮಾರ್ಗದರ್ಶನದಲ್ಲಿ ಪಡೆದಿದ್ದಾರೆ.