ಬಂಟ್ವಾಳ, ಜೂ 11 (DaijiworldNews/HR): ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುವಾಗಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಟ್ಲಪಡ್ನೂರು ಕೊಡಂಗಾಯಿ ನಿವಾಸಿ, ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿಯವರು ಮದುವೆಗೆ ಹೋಗಿ ಬಂದ ನಂತರ ಮನೇಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ಠಾಣೆಗೆ ದೂರು ನೀಡಿದ್ದಾರೆ.
ಜೂ.8 ರಂದು ಮದುವೆ ಹೋಗುವ ವೇಳೆ ಚಿನ್ನಾಭರಣಗಳನ್ನು ಧರಿಸಿಕೊಂಡು ಹೋಗಿದ್ದು, ನಂತರ ಮದುವೆಯಿಂದ ಬಂದು ಮಲಗುವ ಕೋಣೆಯ ಗೋಡೆಯಲ್ಲಿ ರಚಿಸಲಾದ ಶೊಕೇಸ್ ನಲ್ಲಿ ಚಿನ್ನಾಭರಣಗಳನ್ನು ಇಟ್ಟಿದ್ದು, ಮರುದಿನ ಜೂ.9 ರಂದು ಮತ್ತೊಂದು ಮದುವೆಗೆ ಹೋಗಲು ಶೊಕೇಸ್ ನಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ನೋಡಿದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ.
ಸುಮಾರು 32 ಗ್ರಾಂ ತೂಕದ ಚಿನ್ನದ ಸರ-01 ಅಂದಾಜು ಮೌಲ್ಯ-64000/- ಸುಮಾರು 20 ಗ್ರಾಂತೂಕದ ಚಿನ್ನದ ಬ್ರಾಸ್ ಲೈಟ್-01 ಅಂದಾಜು ಮೌಲ್ಯ-40,000/- ಒಟ್ಟು 12 ಗ್ರಾಂ ತೂಕದ ಚಿನ್ನದ ಉಂಗುರ-03 ಅಂದಾಜು 24,000/- ಸದ್ರಿ ಚಿನ್ನಾಭರಣಗಳ ಒಟ್ಟು ಮೌಲ್ಯ 1,28,000/- ಆಗಬಹುದು, ಗೊಲ್ಡ್ ಬಣ್ಣದ ಲೇಡಿಸ್ ರಿಸ್ಟ್ ವಾಚ್-01 ಅಂದಾಜು 500/- ರೂ, ಅರ್ಟಿಫಿಶಲ್ ಕೈ ಬಳೆ-01 ಅಂದಾಜು 100/- ರೂ. ಒಟ್ಟು ಅಂದಾಜು 1,28,600 ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.