ಬಂಟ್ವಾಳ, ಜೂ 11 (DaijiworldNews/HR): ಕರ್ನಾಟಕದಲ್ಲಿ ಅನಗತ್ಯವಾಗಿ ಬಾಲಬಿಚ್ಚಿದರೆ, ಶಾಂತಿಯನ್ನು ಕದಡುವ ಕೆಲಸ ಮಾಡಲು ಮುಂದಾದರೆ ಯೋಗಿಯವರ ಬುಲ್ಡೋಜರ್ ಮಾಡೆಲ್ ಇಲ್ಲಿಗೂ ತರಲು ನಾವು ಸಿದ್ದರಿದ್ದೇವೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬಂಟ್ವಾಳ ಮಂಡಲದ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ನಾರಿ ಸಮ್ಮಾನ ದೇಶದ ಅಭಿಮಾನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರ ಕಳೆದುಕೊಂಡ ಕೆಲವು ರಾಜಕೀಯ ಪಕ್ಷಗಳು ಅಪಪ್ರಚಾರದ ಮೂಲಕ ದೇಶದಲ್ಲಿ ಅಶಾಂತಿ ಹಬ್ಬಿಲು ಪ್ರಯತ್ನ ಮಾಡುತ್ತಿದ್ದು , ಇದನ್ನು ಹತ್ತಿಕ್ಕಲು ಮೋದಿಯವರ ಸರಕಾರ ಶಕ್ತವಾಗಿದೆ ಎಂದು ಅವರು ಭರವಸೆ ನೀಡಿದರು.
ಅಧಿಕಾರ ಕಳೆದುಕೊಂಡ ರಾಜಕೀಯ ಪಕ್ಷಗಳಿಗೆ ಕೋಮುವಾದಿಯ, ಜಾತಿವಾದಿ, ಅಧಿಕಾರದ ಹುಚ್ಚು ಹಿಡಿದಿದೆ, ಕುಟುಂಬ ಗುಲಾಮಗಿರಿಯ ಭಟ್ಟಂಗಿಗಳಾಗಿದ್ದಾರೆ. ಆದರೆ ಅವರ ಹುಚ್ಚು ದೂರವಾಗಬೇಕಾದರೆ ಜನ ಇನ್ನೊಮ್ಮೆ ಸೋಲಿಸಬೇಕಾಗಿದೆ. ಮಾತೃ ಶಕ್ತಿಯ ಜಾಗೃತಿಯ ಮೂಲಕ ದೇಶವನ್ನು ಸುರಕ್ಷಿತವಾಗಿಡುವ ಕೆಲಸ ಮಾಡಬೇಕು ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮೀರಿ ಹೊಸ ದಾಖಲೆ ಸೃಷ್ಟಿ ಮಾಡಿದ ಮೋದಿಯವರ ಯೋಜನೆಗಳು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸುವ ಕೆಲಸ ಮಹಿಳೆಯರು ಮಾಡಬೇಕಾಗಿದೆ. ಹಗರಣಗಳ ಮೂಲಕ ದೇಶ ತಲೆತಗ್ಗಿಸುವ ಮಟ್ಟಕ್ಕೆ ತಲುಪಿದ ಕಷ್ಟ ಕರವಾದ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ಯಾದ ಮೋದಿಯವರು ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ನೀಡಿ ಭವ್ಯ ಭಾರತದ ನಿರ್ಮಾಣಕ್ಕೆ ಕಾರಣವಾದರು.ಜಾಗತಿಕವಾಗಿ ಮೋದಿಯವರ ಕಾರಣಕ್ಕೆ ದೇಶದ ಗೌರವ ಹೆಚ್ಚಾಗಿದೆ. ನೂರಾರು ಯೋಜನೆಗಳನ್ನು ದೇಶಕ್ಕೆ ನೀಡಿದ ಬಿಜೆಪಿ ಯನ್ನು ವಿರೋಧಿ ಗಳು ಕೋಮುವಾದಿ ಬಣ್ಣ ಕಟ್ಟುತ್ತಾರೆ, ಇದು ನ್ಯಾಯನಾ? ಎಂದು ಅವರು ಪ್ರಶ್ನೆಸಿದರು.
ಇನ್ನು ದೇಶವೇ ಮೊದಲು ಎಂಬ ನೀತಿಯನ್ನು ಅನುಸರಿಸಿದ ಬಿಜೆಪಿಗೆ ಜಾತಿ, ಭಾಷೆ, ಧರ್ಮ ದ ನೀತಿಯ ಮೂಲಕ ದೇಶವನ್ನು ಒಡೆದುಹಾಕಿದ ರಾಜಕೀಯ ಪಕ್ಷಗಳು ಬುದ್ದಿ ಹೇಳಬೇಕಾದ ಅನಿವಾರ್ಯತೆ ಇಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಬಂಟ್ವಾಳದಲ್ಲಿ ಮಹಿಳಾ ಶಕ್ತಿ ಗಟ್ಟಿಯಾಗಿದೆ ಎನ್ನುವುದನ್ನು ಈ ದಿನದ ನಾರಿ ಸಮಾವೇಶ ತೋರಿಸಿಕೊಟ್ಟಿದೆ ಎಂದರು. ದೇಶಕ್ಕೆ ಮೋದಿಜಿ ಅನಿವಾರ್ಯ ಎಂಬುದನ್ನು ಮನೆಮನೆಗೆ ತಿಳಿಸುವ ಕಾರ್ಯ ಬಂಟ್ವಾಳದಲ್ಲಿ ನಡೆದಾಗ ಅದರಲ್ಲಿ ಮಹಿಳಾಶಕ್ತಿ ತುಂಬು ಆಸಕ್ತಿಯಿಂದ ಭಾಗವಹಿಸಿತ್ತು ಎನ್ನುವುದನ್ನು ಸ್ಮರಿಸಿಕೊಂಡರು. ತ್ರಿವಳಿ ತಲಾಕ್ ರದ್ದು, ಮುದ್ರಾ ಯೋಜನೆ, ಆರ್ಟಿಕಲ್ 370 ಯಂತಹ ಕ್ರಾಂತಿಕಾರಿ ಬದಲಾವಣೆಗಳು ದೇಶವನ್ನು ಹೊಸದಿಕ್ಕಿನತ್ತ ಕೊಂಡೊಯ್ದಿದ್ದಾರೆ ಎಂದಅವರು ಇಡೀ ದೇಶದ ನಾರಿಶಕ್ತಿ ಮೋದೀಜಿಯವರ ಜೊತೆಗಿದೆ ಎನ್ನುವುದಕ್ಕೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳೇ ಸಾಕ್ಷಿ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಅನೇಕ ಸ್ವಾವಲಂಬಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಎಲ್ಲಾ ಯೋಜನೆಗಳನ್ನು ಜನಸಮುದಾಯಕ್ಕೆ ತಿಳಿಸಿಕೊಡುವ ಕಾರ್ಯ ಮಹಿಳಾಶಕ್ತಿಯಿಂದ ನಡೆಯಬೇಕು ಎಂದರು.
ಬಂಟ್ವಾಳ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಚೌಟ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ. ದೇವಪ್ಪ ಪೂಜಾರಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಧನಲಕ್ಣ್ನೀ ಬಂಗೇರ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಭಾರಿಗಳಾದ, ಕಸ್ತೂರಿ ಪಂಜ, ಪೂಜಾ ಪೈ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಪ್ರಮುಖರಾದ ರಾಮದಾಸ್ ಬಂಟ್ವಾಳ, ಕೊರಗಪ್ಪ ನಾಯ್ಕ , ಸುಧೀರ್ ಶೆಟ್ಟಿ ವೇದಿಕೆಯಲ್ಲಿದ್ದರು.