ಕಾಸರಗೋಡು, ಜೂ 11 (DaijiworldNews/HR): ಚಿನ್ನಕಳ್ಳಸಾಗಾಟ ಆರೋಪಕ್ಕೆ ಸಿಲುಕಿರುವ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದು, ಪಿಣರಾಯಿ ವಿಜಯನ್ ರವರ ಲುಕ್ ಔಟ್ ನೋಟೀಸನ್ನು ಲಗತ್ತಿಸಿದರು.
ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರನ್ನು ಎಸ್ಪಿ ಕಚೇರಿಯ ನೂರು ಮೀಟರ್ ಅಂತರದಲ್ಲಿ ಪೊಲೀಸರು ತಡೆದರು.
ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ ಗಳಿಗೆ ಲುಕ್ ಔಟ್ ನೋಟಿಸ್ ಗಳನ್ನು ಲಗತ್ತಿಸಿದ್ದು, ಈ ವೇಳೆ ಮುಖಂಡರಾದ ಅಶ್ರಫ್ ಎಡನೀರು, ಆಸಿಫ್, ಅಝೀಜ್ ಕಳತ್ತೂರು ಮೊದಲಾದವರು ನೇತೃತ್ವ ನೀಡಿದರು.