ಸಿಡ್ನಿ, ಜ 13(SM): ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಅವರು ಅರ್ಧ ಶತಕ ಸಿಡಿಸಿದ್ದು, ಆ ಮೂಲಕ 10 ಸಾವಿರ ರನ್ ಪೂರೈಸಿದ್ದಾರೆ. ಧೋನಿಯವರು ನಿಧಾನಗತಿಯಲ್ಲಿ ಅರ್ಧ ಶತಕ ಪೂರೈಸಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಆದರೆ 10 ಸಾವಿರದ ಗಡಿ ದಾಟಿರುವುದು ಪ್ರಮುಖವಾಗಿದೆ.
10 ಸಾವಿರ ರನ್ ಗಡಿ ದಾಟಿದವರ ಪೈಕಿ ಧೋನಿ ಭಾರತದ 5ನೇ ಆಟಗಾರ ಎನಿಸಿಕೊಂಡಿದ್ದಾರೆ. 37 ವರ್ಷ ವಯಸ್ಸಿನ ಧೋನಿ ಅವರು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ 9,999ರನ್ ಗಳಿಸಿದ್ದರು. ಈ ಪಂದ್ಯದಲ್ಲಿ 51ರನ್ ಗಳಿಸುವ ಮೂಲಕ ಮಾಹಿ ಅವರು ಈ ಸಾಧನೆ ಮಾಡಿದರು. ವಿಕೆಟ್ ಕೀಪರ್ ಗಳ ಪೈಕಿ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ ನಂತರ ೨ನೇಯವರಾಗಿ 10 ಸಾವಿರ ಮೈಲಿಗಲ್ಲು ತಲುಪಿದವರು ಭಾರತದ ಎಂಎಸ್ ಧೋನಿ ಮಾತ್ರ.