ಉಡುಪಿ, ಜೂನ್ 11 (DaijiworldNews/MS): ಧಾರ್ಮಿಕ, ಸಾಮಾಜಿಕ, ಸಹಕಾರಿ, ರಾಜಕೀಯ ಮುಖಂಡರಾಗಿ ಗುರುತಿಸಿಕೊಂಡಿರುವ ಯಶಪಾಲ್ ಸುವರ್ಣ ರಿಗೆ ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈ ಗೊಳ್ಳಬೇಕು ಹಾಗೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜೀವ ಬೆದರಿಕೆ ಹಿನ್ನಲೆಯಲ್ಲಿ ಸೂಕ್ತ ಭದ್ರತೆ ಒದಗಿಸ ಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮೀನುಗಾರ ಕ್ರಿಯಾಸಮಿತಿಯು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.
ಶುಕ್ರವಾರದಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯವರನ್ನು ಭೇಟಿಯಾದ ಅಖಿಲ ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಪಧಾಧಿಕಾರಿಗಳು "ಕಳೆದ ಒಂದ ವಾರದಿಂದ ಮೀನುಗಾರ ಮುಖಂಡ ಯಶಪಾಲ್ ಸುವರ್ಣರವರಿಗೆ ಸಾಮಾಜಿಕ ಜಾಲ ತಾಣ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಹತ್ಯೆ ಬೆದರಿಕೆ ಮಾಡಿ, ತಲೆ ಕಡಿದವರಿಗೆ ರೂ. 10 ಲಕ್ಷ ನೀಡುವುದಾಗಿ ಬಹಿರಂಗ ಪೋಸ್ಟ್o ಮಾಡಿ ಹತ್ಯೆಗೆ ಪಚೋದನೆ ನೀಡಿದ್ದಾರೆ. ಮೀನುಗಾರರ ಮುಖಂಡರಾದ ಯಶಪಾಲ್ ಸುವರ್ಣ ರವರು ಹಿಂದುಳಿದ ವರ್ಗದ ರಾಷ್ಟ್ರೀಯ ನಾಯಕರಾಗಿದ್ದು, ಅಖಿಲ ಭಾರತೀಯ ಮೀನುಗಾರರ ಸಂಘದ ಪ್ರಧಾನ ಸಂಘಟನಾ ಕಾರ್ಯದರ್ಶಿ ಯಾಗಿ ಮತ್ತು ಅಖಿಲ ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಗೌರವ ಸಲಾಯೆಗಾರರಾಗಿ ಮಾತ್ರವಲ್ಲದೇ ಪತಿಷ್ಟಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರ್, ಮಹಾಲಕ್ಷ್ಮೀ ಕೋಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ ಅಧ್ಯಕ್ಷರಾಗಿ, ಹಾಗೂ ಇನ್ನೂ ಅನೇಕ ಸಂಘ ಸಂಸ್ಥೆ ಗಳಲ್ಲಿ ಸಕ್ರಿಯಾರಾಗಿದ್ದು ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸಮಸ್ಯೆ ಪರಿಹರಿಸುವಲ್ಲಿ ಮುಂಚೂಣಿ ಯಲ್ಲಿದ್ದಾರೆ. ರಾಷ್ಟ್ರ ಮಟ್ಟದ ನಾಯಕರಾಗಿರುವ ಯಶಪಾಲ್ ಸುವರ್ಣರಿಗೆ ಜೀವ ಬೆದರಿಕೆ ಹಾಕಿ ರುವ ಈ ಕೃತ್ಯವನ್ನು ಸಮಸ್ತ ಮೀನುಗಾರರ ಸಮುದಾಯವು ತೀವ್ರ ವಾಗಿ ಖಂಡಿಸುತ್ತದೆ
.
ಧಾರ್ಮಿಕ, ಸಾಮಾಜಿಕ, ಸಹಕಾರಿ, ರಾಜಕೀಯ ಮುಖಂಡರಾಗಿ ಗುರುತಿಸಿಕೊಂಡಿರುವ ಯಶಪಾಲ್ ಸುವರ್ಣ ರಿಗೆ ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈ ಗೊಳ್ಳಬೇಕು ಹಾಗೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜೀವ ಬೆದರಿಕೆ ಹಿನ್ನಲೆಯಲ್ಲಿ ಸೂಕ್ತ ಭದ್ರತೆ ಒದಗಿಸ ಬೇಕಾಗಿ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಅಖಿಲ ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಉಪಾಧ್ಯಕ್ಸರಾದ ರಮೇಶ್ ಕೋಟಿಯನ್, ಪ್ರದಾನ ಕಾರ್ಯ ದರ್ಶಿ ಕಿಶೋರ್ ಡಿ ಸುವರ್ಣ ಕೋಶಾಧಿಕಾರಿ ಸೋಮನಾಥ್ ಕಾಂಚನ್, ಸಂಘಟನಾ ಕಾರ್ಯದರ್ಶಿ ದಯಾನಂದ ಕುಂದರ್ ಮೀನುಗಾರರ ಸಂಘದ ಅಧ್ಯಕ್ಷ ರಾದ ದಯಾನಂದ್ ಕೆ ಸುವರ್ಣ, ಉಪಾಧ್ಯಕ್ಷ ನಾಗರಾಜ ಜಿ ಕುಂದರ್, ಪ್ರಧಾನ ಕಾರ್ಯದರ್ಶಿ ರತ್ನಾಕರ್ ಸಾಲಿಯಾನ್ ಆಳ ಸಮುದ್ರ ಮೀನುಗರ ಸಂಘದ ಅಧ್ಯಕ್ಷ ಸುಭಾಸ್ ಮೆಂಡನ್, ಯಾಂತ್ರಿಕ ಸೊಸೈಟಿ ಯ ಅಧ್ಯಕ್ಷ ರಾಮಚಂದ್ರ ಕುಂದರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ನಿರ್ದೇಶಕರಾದ ಪ್ರಕಾಶ್ ಬಂಗೇರ, ಪ್ರಭಾಕರ್ ಸುವರ್ಣ, ಜಗನಾಥ್ ಅಮೀನ್, ಅಶೋಕ್ ಮೆಂಡನ್ ಆಳ ಸಮುದ್ರ ಮೀಗಾರರ ಸಂಘದ ಮಾಜಿ ಅಧ್ಯಕ್ಷ ವಿಠ್ಠಲ್ ಕರ್ಕೇರ, ಉಪಾಧ್ಯಕ್ಷ ಜ್ಞಾನೆಶ್ವರ ಕೋಟಿಯನ್, ಸುಧಾಕರ್ ಮೆಂಡನ್, ಸುರೇಶ ಬಿ ಕುಂದರ್, 370 ಟ್ರಾಲ್ ಬೋಟ್ ಸಂಘದ ಕಾರ್ಯದರ್ಶಿ ಪ್ರತಾಪ್ ಸಾಲಿಯಾನ್, ಕೋಶಾಧಿಕಾರಿ ಶಶಿಕಾಂತ್ ಕುಂದರ್, ಮನೋಹರ್ ಕುಂದರ್, ವಿಶ್ವನಾಥ್ ಶ್ರೀಯನ್, ಚಂದ್ರ ಶೇಖರ್ ಶ್ರೀಯನ್ ಪ್ರಶಾಂತ್ ತಿಂಗಳಾಯ ಮುಂತಾದವರು ಭಾಗವಹಿಸಿದರು.