ಬೆಂಗಳೂರು, ಜ 13(SM): ಬಿಎಂಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಆನೇಕಲ್-ಚಂದಾಪುರ ಮಾರ್ಗ ಮಧ್ಯೆ ಮರಸೂರು ಗೇಟ್ ಬಳಿ ಭಾರೀ ಅಪಘಾತವೊಂದು ತಪ್ಪಿದೆ.
ಬಿಎಂಟಿಸಿ ಬಸ್ ಆನೇಕಲ್ನಿಂದ ಕಲಾಸಿಪಾಳ್ಯ ಕಡೆ ತೆರಳುತ್ತಿತ್ತು. ಈ ವೇಳೆ ವಿರುದ್ಧ ದಿಕ್ಕಿನಿಂದ ಲಾರಿಯೊಂದು ವೇಗವಾಗಿ ಬಂದಿದೆ. ಲಾರಿಯ ಅತಿಯಾದ ವೇಗ ಗಮನಿಸಿದ ಬಸ್ ಚಾಲಕ ಮೌನೇಶ್ ಚಾಣಾಕ್ಷತನದಿಂದ ಬಸ್ನ್ನು ಎಡಗಡೆ ಟರ್ನ್ ತೆಗೆದುಕೊಳ್ಳುವ ಮೂಲಕ ಭಾರಿ ಅಪಘಾತವನ್ನು ತಪ್ಪಿಸಿದ್ದಾರೆ. ಆದರೂ ಕೂಡ ಲಾರಿ ಬಸ್ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ.
ಆದರೆ ಬಸ್ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಬಸ್ಸಿನ ಒಂದು ಬದಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೇ ಹಾಗೆಯೇ ಪರಾರಿಯಾಗಿದ್ದಾನೆ. ಬಸ್ನಲ್ಲಿ ಸುಮಾರು 50 ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಅಪಯಾದಿಂದ ಪಾರಾಗಿದ್ದಾರೆ.
ಲಾರಿ ಚಾಲಕ ಕುಡಿದ ಅಮಲಿನಲ್ಲಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಕುರಿತಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.