ಕಾಸರಗೋಡು, ಜೂ 10 (DaijiworldNews/HR): ಕಳ್ಳಸಾಗಾಟ ಆರೋಪ ಎದುರಿಸುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ವಿದ್ಯಾನಗರದಲ್ಲಿರುವ ಪಕ್ಷದ ಕಚೇರಿ ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರನ್ನು ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿ ಪೊಲೀಸರು ತಡೆದರು.
ಬಳಿಕ ನಡೆದ ಧರಣಿಯನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಪಿ.ಕೆ ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಿ.ಗಂಗಾಧರನ್, ಶಾಂತಮ್ಮ ಫಿಲಿಪ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಕುಮಾರ್ ಪಳ್ಳಾಯಿಲ್, ಕರುಣ್ ಥಾಪಾ, ಪಿ.ವಿ.ಸುರೇಶ್, ವಿ.ಆರ್.ವಿದ್ಯಾಸಾಗರ್, ಎಂ.ಕುಂಞಂಬು ನಂಬಿಯಾರ್, ಸೆಬಾಸ್ಟಿಯನ್ ಪಠಾಲಿಲ್, ಕೆ.ವಿ.ಸುಧಾಕರನ್, ಟೋಮಿ ಮಿ ಪ್ಲಾಚೇಣಿ, ಹರೀಶ್.ಪಿ.ನಾಯರ್, ಜೆ.ಎಸ್.ಸೋಮಶೇಖರ ಶೇಣಿ, ಯುವ ಕಾಂಗ್ರೆಸ್ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೋಮೋನ್ ಜೋಸ್, ಜಿಲ್ಲಾಧ್ಯಕ್ಷ ಬಿ.ಪಿ.ಪ್ರದೀಪ್ ಕುಮಾರ್, ಮೀನುಗಾರಿಕಾ ಕಾಂಗ್ರೆಸ್ ಅಖಿಲ ಭಾರತ ಕಾರ್ಯದರ್ಶಿ ಆರ್.ಗಂಗಾಧರನ್, ಬ್ಲಾಕ್ ಅಧ್ಯಕ್ಷರಾದ ಕೆ.ಖಾಲಿದ್, ಥಾಮಸ್ ಸೆಬಾಸ್ಟಿಯನ್, ಮಡಿಯನ್ ಉನ್ನಿಕೃಷ್ಣನ್, ಮಧುಸೂದನನ್ ಬಾಳೂರು, ಕೆ.ವಾರಿಜಾಕ್ಷನ್, ಡಿಎಂಕೆ ಮೊಹಮ್ಮದ್, ಲಕ್ಷ್ಮಣಪ್ರಭು, ಎ.ವಾಸುದೇವನ್, ಪಿ.ಸಿ.ಸುರೇಂದ್ರನ್ ನಾಯರ್, ಪಿ.ಸಿ. ರಾಮಚಂದ್ರನ್, ಜಿ. ನಾರಾಯಣನ್ ಮೊದಲಾದವರು ನೇತೃತ್ವ ನೀಡಿದರು.