ವಿಟ್ಲ, ಜ 13(SM): ವ್ಯಕ್ತಿಯೊಬ್ಬರಿಗೆ ಗ್ರಾ.ಪಂ.ನ ಮಾಜಿ ಸದಸ್ಯ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ನಡೆದಿದೆ. ಸಾಲೆತ್ತೂರು ಸಮೀಪದ ಪಾಲ್ತಾಜೆ ನಿವಾಸಿ ಕೂಲಿ ಕಾರ್ಮಿಕ ಹಮೀದ್(52) ಹಲ್ಲೆಗೊಳಗಾದವರು.
ಅವರು ಇಂದು ಬೆಳಗ್ಗೆ ಸಾಲೆತ್ತೂರು ಸಮೀಪದ ಮೆದು ಜಂಕ್ಷನಲ್ಲಿ ಬಸ್ಸಿಗೆ ಕಾಯುತ್ತಿದ್ದಾಗ ವೀರಕಂಭ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆಲಿಂಜ ಪಾತ್ರತೋಟ ನಿವಾಸಿ ಸತ್ತಾರ್(35) ನಿಂದ ಹಮೀದ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಾಯಾಳುವನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.