ಸುಬ್ರಹ್ಮಣ್ಯ, ಜೂ 09 (DaijiworldNews/HR): ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮಾಡಿನ ರೀಪೆರಿ ಮಾಡದೇ ಜೋರು ಗಾಳಿ ಮಳೆಗೆ ನೀರು ಠಾಣೆಯ ಒಳಗೆ ಬೀಳುವ ಪರಿಸ್ಥಿತಿ ಉಂಟಾಗಿದ್ದು, ಠಾಣೆಗೆ ಟರ್ಪಾಲು ಹೊದಿಕೆ ಮಾಡಲಾಗಿದೆ.
ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸ್ ಠಾಣೆಯ ಪರಿಕರಗಳಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಇಲ್ಲದಂತಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮೇಲ್ಚಾವಣಿ ಸಂಪೂರ್ಣ ದುಸ್ಥಿತಿಗೆ ಬಂದಿದ್ದು ಮಳೆಗಾಲದಲ್ಲಿ ಮಳೆಯ ನೀರು ಪೊಲೀಸ್ ಠಾಣೆಯ ಒಳಗಡೆ ಸುರಿಯುತ್ತಿದೆ ಇದರಿಂದ ಅಲ್ಲಿನ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೇ, ಠಾಣೆಯಲ್ಲಿರುವ ದಾಖಲೆಗಳನ್ನು ರಕ್ಷಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ.