ಸುಳ್ಯ, ಜೂ 09 (DaijiworldNews/MS): ಸುಳ್ಯದಲ್ಲಿ ಜೂನ್ 5 ರಂದು ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
img src=https://daijiworld.ap-south-1.linodeobjects.com/Linode/img_tv247/ms-060622-firing.jpg>
ಮೊಹಮ್ಮದ್ ಸಾಯಿ
ಬಂಧಿತ ಆರೋಪಿಗಳನ್ನು ಕುಶಾಲನಗರ ಹೊಸೂರು ನಿವಾಸಿ ಕೆ ಜಯನ್ (38), ಮಡಿಕೇರಿ ಮುಳಿಯ ಲೇ ಔಟ್ ನಿವಾಸಿ ವಿನೋದ್ ಆರ್ (34), ಮಡಿಕೇರಿ, ಸಿಎಂ.ಸಿ ಕ್ವಾಟ್ರಾಸ್ ರಾಣಿ ಬೆಟ್ಟು ನಿವಾಸಿ ಮನೋಜ್ (25) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಕಾರು ಹಾಗೂ ನಾಡ ಪಿಸ್ತೂಲು ಹಾಗೂ ಎರಡು ಸಜೀವ ತೋಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂನ್ 5 ರಂದು ಸುಳ್ಯದ ಜಯನಗರ ನಿವಾಸಿ ಮೊಹಮ್ಮದ್ ಸಾಯಿ (39) ತನ್ನ ಸಹೋದರಿಯ ಮನೆಯಿಂದ ಹಿಂತಿರುಗಿ ಕಾರಿನ ಬಾಗಿಲು ತೆರೆಯುತ್ತಿದ್ದಾಗ ಆರೋಪಿಗಳು ಗುಂಡು ಹಾರಿಸಿದ್ದರು. ಗುಂಡು ದೂರುದಾರರ ಎಡಭಾಗದ ಹಿಂಭಾಗಕ್ಕೆ ತಗುಲಿ ಕಾರಿನ ಎರಡು ಬಾಗಿಲುಗಳ ನಡುವೆ ತಗುಲಿತ್ತು .
ಈ ಸಂಬಂಧ ಮೊಹಮ್ಮದ್ ಸಾಯಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು. ಕೊಲೆ ಯತ್ನದ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯ ಎಎಸ್ ಐ ದಿಲೀಪ್ ಜಿ ಆರ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.