ನವದೆಹಲಿ,ಜ 13(MSP): 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸುತ್ತಿರುವುದಾಗಿ ಭಾರತೀಯ ಮೂಲದ ಸಂಸದೆ ತುಳಸಿ ಗಬರ್ಡ್ ತಿಳಿಸಿದ್ದಾರೆ.
ಅಮೆರಿಕ ಕಾಂಗ್ರೆಸ್(ಕೆಳಮನೆ) ಗೆ ಆಯ್ಕೆಯಾದ ಪ್ರಥಮ ಹಿಂದೂ ಮಹಿಳೆ ಎಂಬ ಹಿರಿಮೆ ಹೊಂದಿರುವ ಗಬ್ಬಾರ್ಡ್ ನಾಲ್ಕನೇ ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಸ್ವರ್ಧೆ ಬಗ್ಗೆ ಅಧಿಕೃತ ಘೋಷಣೆ ಮುಂದಿನ ವಾರದೊಳಗೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದಿಂದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಸೇರಿದಂತೆ ಟ್ರಂಪ್ ವಿರುದ್ದ ಅಖಾಡಕ್ಕೆ ಇಳಿಯಲು 12 ಕ್ಕೂ ಹೆಚ್ಚು ಜನ ನಾಯಕರು ಉತ್ಸಾಹ ತೋರಿಸಿದ್ದಾರೆ. ತುಳಸಿ ಅವರು ಭಾರತೀಯ ಅಮೆರಿಕನ್ ಅಲ್ಲದೇ ಇದ್ದರೂ ಅವರು ಹಿಂದೂ ಆಗಿರುವುದರಿಂದ ಭಾರತೀಯ ಅಮೆರಿಕನ್ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.