ಕಾಸರಗೋಡು, ಜೂ 09 (DaijiworldNews/MS): ವಿದ್ಯುತ್ ಸಾಮಾಗ್ರಿಗಳನ್ನು ಕಳವು ಗೈಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಅಯ್ಯಪ್ಪನ್ (30) ಮತ್ತು ಎಯಿಮಲೈ (31) ಬಂಧಿತ ಆರೋಪಿಗಳು.
ಪನಯಾಲ್ ಬಟ್ಟತ್ತೂರಿನ ಮೇಘ ವಿದ್ಯುತ್ ಕಂಪೆನಿಯ ವಿದ್ಯುತ್ ಉಪಕರಣಗಳನ್ನು ಕಳವುಗೈದಿದ್ದು, ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ