ಉಡುಪಿ,ಜ 13(MSP): ಕಪ್ಪೆಟ್ಟುವಿನ ದಲಿತ ಮುಖಂಡರ ವಿರುದ್ಧ ಸುಳ್ಳು ದೂರು ನೀಡಿರುವುದನ್ನು ವಿಚಾರಿಸದೆ ಕೇಸು ದಾಖಲಿಸಿರುವುದನ್ನು ಖಂಡಿಸಿ ಅಂಬೇಡ್ಕರ್ ಯುವಸೇನೆ ಎಸ್.ಪಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ತಕ್ಷಣ ಜಾಗೃತರಾದ ಪೋಲೀಸ್ ಇಲಾಖೆ ಪ್ರತಿಭಟನೆ ಕೈ ಬಿಡುವಂತೆ ಮಾತುಕತೆಗೆ ಮನವಿ ಮಾಡಿದರು.
ಕಪ್ಪೆಟ್ಟುವಿನ ರೇಷ್ಮಾ ಎಂಬ ಮಹಿಳೆಯೊಬ್ಬಳು ಇದೇ ಪರಿಸರದ ದಲಿತ ಮುಖಂಡರು ರಾತ್ರಿವೇಳೆ ತನ್ನ ಮೈಮೇಲೆ ಕೈ ಮಾಡಿ ಜೀವಬೇದರಿಕೆ ಹಾಕಿರುವುದಾಗಿ ಉಡುಪಿ ಮಹಿಳಾ ಠಾಣೆಗೆ ದೂರು ನೀಡಿದ್ದರು. ವಾಸ್ತವವಾಗಿ ಈ ಎಲ್ಲಾ ದಲಿತ ಮುಖಂಡರು ಅದೇ ದಿನ ಅದೇ ವೇಳೆ ಮಲ್ಪೆ ಠಾಣೆ ವ್ಯಾಪ್ತಿಯ ತೊಟ್ಟಂ ಮಂಝುನಾಥ ಭಜನಾ ಮಂದಿರದ ವಠಾರದಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯೊಬ್ಬಳು ನೀದ್ದಾರೆ ಎಂಬ ಕಾರಣಕ್ಕೆ ಸತ್ಯಾಸತ್ಯೆಯನ್ನು ವಿಚಾರಿಸದೆ ಸುಳ್ಳು ದೂರನ್ನು ಅತುರಾತುರವಾಗಿ ದಾಖಲಿಸಿರುವುದನ್ನು ಅಂಬೇಡ್ಕರ್ ಯುವಸೇನೆ ಆಕ್ರೋಶ ವ್ಯಕ್ತಪಡಿಸಿತು.
ದಲಿತರ ವಿರುದ್ಧ ದಲಿತರನ್ನೇ ಎತ್ತಿಕಟ್ಟುವ ಹೊರಗಿನ ಬಾಹ್ಯಶಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಉಡುಪು ಡಿವೈಎಸ್ಪಿ ಆರ್ ಜೈಶಂಕರ್ ಮತ್ತು ಸರ್ಕಲ್ ಇನ್ಸಪೆಕ್ಟರ್ ಮಂಜುನಾಥರವರು ಮೊಕದ್ದಮೆಯ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್, ಅನಿಲ್ ಅಂಬಲಪಾಡಿ,ಗುಣವಂತ ತೊಟ್ಟಂ,ಭಗವನ್ದಾಸ್ ಮಲ್ಪೆ,ಸಂತೋಷ ಕಪ್ಪಟ್ಟು,ಮಂಜುನಾಥ ಅಮೀನ್ ಕಪ್ಪಟ್ಟು,ಸುಕೇಶ್ ನಿಟ್ಟೂರು,ದಿನೇಶ್ ಮೂಡಬೆಟ್ಟು,ದಯಾನಂದ ಕಪ್ಪೆಟ್ಟು, ಜ್ಯೋತಿ ಕಪ್ಪಟ್ಟು, ಸುಂದರಿ ಪುತ್ತೂರು, ಸಂದ್ಯಾತಿಲಕ್ರಾಜ್,ಸುಂದರ ಕಪ್ಪಟ್ಟು,ಗಣೇಶ್ ನೆರ್ಗಿ ಮುಂತ್ತಾದವರು ಭಾಗವಹಿಸಿದ್ದರು.