ಮಂಗಳೂರು: ಅನಿವಾಸಿ ಉಧ್ಯಮಿ ಭಾಸ್ಕರ ಶೆಟ್ಟಿ ಹತ್ಯೆಯ ವಿಚಾರಣೆ ಆರಂಭಗೊಂಡಿದ್ದು ಬಂಧಿತರು ಚಾರ್ಜ್ ಶೀಟ್ ನಲ್ಲಿ ಧಾಕಲಾದ ಅರೋಪಗಳನ್ನು ತಿರಸ್ಕರಿಸಿದ್ದಾರೆ.
ಜಿಲ್ಲಾ ಸೆಶನ್ಸ್ ನ್ಯಾಯಲಯದ ನ್ಯಾಯಧಿಪತಿಗಳಾದ ವೆಂಕಟೇಶ್ ನಾಯಕ್ ಅವರು ಸೋಮವಾರ ,ಅಕ್ಟೋಬರ್ 23 ರಂದು ಅರೋಪಿಗಳ ಸಮ್ಮುಖದಲ್ಲಿ ಚಾರ್ಜ್ ಶೀಟನ್ನು ಓದಿ ಹೇಳಿದ್ದರು. ಆದರೆ ಆರೋಪಿ ಪಟ್ಟಿಯಲ್ಲಿರುವ ಭಾಸ್ಕರ ಶೆಟ್ಟಿಯ ಪತ್ನಿ ,ಮಗ ಹಾಗೂ ಸಹಾಯಕ ಅರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ. ನಂತರ ನ್ಯಾಯಾಧೀಶರು ವಾದವನ್ನು ನವೆಂಬರ್ 28 ತಾರೀಕಿಗೆ ಮುಂದೂಡಿದರು.
ಶಿವಮೊಗ್ಗದ ಜೈಲಿನಲ್ಲಿರುವ ರಾಜೇಶ್ವರಿ(51)ನವನೀತ್ ಶೆಟ್ಟಿ(21) ಹಾಗೂ ನಿರಂಜನ್ ಭಟ್(26) ಇವರನ್ನು ಮಣಿಪಾಲ ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಕೋರ್ಟ್ ಕಾರ್ಯಕಲಾಪಗಳನ್ನು ನಂತರ ಇವರನ್ನು ಮರಳಿ ಶಿವಮೊಗ್ಗ ಜೈಲಿಗೆ ಕೊಂಡೊಯ್ಯಲಾಯಿತು.
ಪ್ರಕರಣದಲ್ಲಿ ರಾಜೇಶ್ವರಿ, ನವನೀತ್ ಶೆಟ್ಟಿ, ಹಾಗೂ ನಿರಂಜನ್ ಮೇಲೆ ಹತ್ಯಾ ಪ್ರಕರಣ ಧಾಕಲಾಗಿದ್ದರೆ, ನಿರಂಜನ್ ತಂದೆ ಶ್ರೀನಿವಾಸ್ ಭಟ್(57) ಕಾರು ಚಾಲಕ ರಘು(26) ಸಾಕ್ಷ್ಯಾಧಾರಗಳ ನಾಶ ಅರೋಪವನ್ನು ಹೊತ್ತಿದ್ದಾರೆ.