ಮಂಗಳೂರು,ಜೂ 08 (DaijiworldNews/MS): ನಗರದ ಕಂಕನಾಡಿಯ ರಸ್ತೆ ಬದಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ನೌಕರನಿಗೆ ಪಾಲಿಕೆಯಿಂದ 20,000 ರೂ. ದಂಡ ವಿಧಿಸಲಾಗಿದೆ.
ಕಂಕನಾಡಿ ಬಳಿಯ ರಸ್ತೆಯಲ್ಲಿ ಈ ಹಿಂದೆ ಕಸ ಎಸೆದು ಬ್ಲ್ಯಾಕ್ ಸ್ಪಾಟ್ ನಿರ್ಮಾಣಗೊಂಡಿದ್ದು , ಆ ಪ್ರದೇಶವನ್ನು ಪಾಲಿಕೆಯು ಸಂದರಗೊಳಿಸಿತ್ತು. ಬಳಿಕ ಕಸ ಎಸೆಯುವುದು ನಿಯಂತ್ರಣಕ್ಕೆ ಬಂದಿದ್ದರೂ ಕೆಲವು ದಿನಗಳಿಂದ ಕೆಲವೊಬ್ಬರು ಕಸ ಎಸೆಯುತ್ತಿದ್ದರು.
ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ 20,000 ಸಾವಿರ ರೂ. ದಂಡ ವಿಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕರಾದ ಶಿವಲಿಂಗ , ರಕ್ಷಿತಾ, ಮಲೇರಿಯಾ ಮೇಲ್ವಿಚಾರಕರಾದ ಚಂದ್ರಹಾಸ್ ಉಪಸ್ಥಿತರಿದ್ದರು.