ಕಾರ್ಕಳ, ಜೂ 08 (DaijiworldNews/MS): ಐತಿಹಾಸಿಕ ಹಿನ್ನಲೆಯ ಕೋಟೆ ಶ್ರೀ ಮಾರಿಯಮ್ಮ ಶ್ರೀ ಕ್ಷೇತ್ರದಲ್ಲಿ ದೇವಸ್ಥಾನದ ದಾಖಲೆಗಳು ಚಿನ್ನ ಬೆಳ್ಳಿ ಅಭರಣ ಸಹಿತ ಅಮೂಲ್ಯ ಬೆಲೆ ಬಾಳುವ ವಸ್ತುಗಳನ್ನು ಸಂರಕ್ಷಿಸಿ ಇಟ್ಟಿದ್ದ ಲಾಕರ್ನ ತೆರವು ಕಾರ್ಯ ಮುಂದುವರಿಯುತ್ತಿದೆ.
ಶ್ರೀ ಕ್ಷೇತ್ರದ ಪುನರ್ ನಿರ್ಮಾಣ, ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತವಾಗಿ ಶ್ರೀ ಕ್ಷೇತ್ರ ತೆರವು ಕಾರ್ಯ ಪೂರ್ಣಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗರ್ಭಗುಡಿಯ ಸುರಕ್ಷಿತ ಪ್ರದೇಶದಲ್ಲಿ ಸ್ಥಾಪಿಸಲಾದ ಭಾರೀ ಗಾತ್ರದ ಲಾಕರ್ನ ತೆರವು ಕಾರ್ಯ ಭರದಿಂದ ಸಾಗುತ್ತಿದೆ.
1980ರಲ್ಲಿ ಮುಂಬಯಿ ಕಂಪೆನಿಯೊಂದರಿಂದ ರೂ.14 ಲಕ್ಷ ಭರಿಸಿ ಖರೀದಿಸಿ ಶ್ರೀ ಕ್ಷೇತ್ರದೊಳಗೆ ಸ್ಥಾಪಿಸಲಾಗಿದ್ದ ಲಾಕರ್ ಇದಾಗಿದೆ ಎಂದು ತಿಳಿದುಬಂದಿದೆ. ಜೀಣೋಧ್ದಾರಗೊಂಡ ಬಳಿಕ ಶಿಲಾಮಯವಾದ ನೂತನ ಕ್ಷೇತ್ರದಲ್ಲಿ ಹೊಸ ಲಾಕರ್ ಸ್ಥಾಪನೆ ಚಿಂತನೆ ನಡೆಸಿರುವುದರಿಂದ ಹಳೆಯದಾದ ಲಾಕರ್ನ ತರವು ಕಾರ್ಯ ನಡೆಸಲಾಗಿದೆ. ಶ್ರೀ ಕ್ಷೇತ್ರದ ಅಧೀನದಲ್ಲಿ ಇರುವ ವಾಣಿಜೈ ಸಂಕೀರ್ಣದ ತೆರವು ಕಾರ್ಯ ಕೆಲ ದಿನಗಳೊಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.