ಉಡುಪಿ, ಜೂ 07(DaijiworldNews/MS): ಕಾರ್ಕಳ ಬೋಳ ಗ್ರಾಮ ಪಂಚಾಯತ್ ವ್ಸಾಪ್ತಿಯಲ್ಲಿ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕ ಅಳವಡಿಸಿದ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರಗಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ರಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ನಾಥೂರಾಮ್ ಗೂಡ್ಸೆ ರಸ್ತೆ ಎಂಬ ತೋರು ಬರವದ ಫಲಕವನ್ನು ಹಾಕಿರುವುದು ದೇಶದ್ರೋಹದ ಕೆಲಸವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಗುಂಡಿಕ್ಕೆ ಕೊಂದ ದೇಶದ್ರೋಹಿ ನಾಥೂರಾಮ್ ಗೂಡ್ಸೆಯ ಹೆಸರನ್ನು ಬರೆದಿರುವದು, ಮಹಾತ್ಮ ಗಾಂಧೀಜಿಯವರನ್ನು ಕೊಂದವನನ್ನು ವೈಭವೀಕರಿಸುವ ಕೆಲಸ ಶಂಕಿತ ಸಂಘಟನೆಯಿಂದಲೇ ನಡೆದಿರಬಹುದು ಎಂದು ಭಾವಿಸಲಾಗಿದೆ. ಮಹಾತ್ಮ ಗಾಂಧೀಜಿಯವರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕನ ಹೆಸರನ್ನು ಫಲಕದಲ್ಲಿ ಹಾಕಿರುವುದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಒಕ್ಕೊರಲಿನಿಂದ ಕಂಡಿಸುತ್ತದೆ.
ಚುನಾವಣೆ ಹತ್ತಿರ ಬರುತ್ತಿರುವಂತೆ ಜನರ ಶಾಂತಿಯನ್ನು ನೆಮ್ಮದಿಯನ್ನು ಕದಡಿಸುವ ಬೇರೆ ಬೇರೆ ಕೆಲಸಗಳು ಬೇರೆ ಬೇರೆ ಮೂಲಗಳಿಂದ ಈಗ ನಡೆಯಿತ್ತಿವೆ. ಇದನ್ನೆಲ್ಲಾ ನೋಡುತ್ತಿದ್ದು ಮೌನವಾಗಿರುವುದು ಸರಕಾರದ ವೈಫಲ್ಯವನ್ನು ಎತ್ತಿತೋರಿಸುತ್ತಿದೆ.ಶಾಂತಿಯುತವಾದ ನಮ್ಮ ಜಿಲ್ಲೆಯಲ್ಲಿ ಭಯೋತ್ಪಾದನೆ ಮುಟ್ಟಿಸುವ ಅಂಗವಾಗಿ ಇಂತಹ ಕೆಲಸವನ್ನು ಪ್ರಾರಂಭಿಸಲಾಗಿದೆ. ಈ ಕೆಲಸವನ್ನು ಯಾರೇ ಮಾಡಿದ್ದರು ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಕೈಗೊಳ್ಳುವುದು ಅನಿವಾರ್ಯವಾಗಿದೆ. ಭಯೋತ್ಪಾದನೆ ಕೆಲಸಗಳು ನಿರಂತರವಾಗಿ ನಡೆಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಇಂತಹ ಆದುದರಿಂದ ಈ ವಿಷಯದಲ್ಲಿ ಪೊಲೀಸ್ ಪರಿಷ್ಕಾಧಿಕಾರಿಗಳಾದ ತಾವು ಅಗತ್ಯವುಳ್ಳ ಸೂಕ್ತ ಕ್ರಮ ಶೀಘ್ರವಾಗಿ ತೆಗೆದುಕೊಳ್ಳಬೇಕಾಗಿ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಪಕ್ಷದ ಮೂಖಂಡರಾದ ದಿನೇಶ್ ಪುತ್ರನ್ ˌ ಬಿ .ಕುಶಲ ಶೆಟ್ಟಿ ˌ ಪ್ರಖ್ಯಾತ ಶೆಟ್ಟಿ ˌಭಾಸ್ಕರ ರಾವ್ ಕಿದಿಯೂರು ˌ ನಾಗೇಶ ಕುಮಾರ್ ಉದ್ಯಾವರˌ ರಮೇಶ್ ಕಾಂಚನ್ ˌ ಅಣ್ಣಯ್ಯ ಸೇರಿಗಾರ್ ˌ ಅಲೆವೂರು ಹರಿಶ್ ಕಿಣಿ ˌ ಕೀರ್ತಿ ಶೆಟ್ಟಿ ˌ ಇಸ್ಮಾಯಿಲ್ ಅತ್ರಾಡಿ ˌಉಪೇಂದ್ರ ಮೆಂಡನ್ˌ ಲೂಯಿಸ್ ಲೊಬೋ ˌ ಸಾಯಿರಾಜ್ ˌ ಅಹ್ಮದ್ ˌ ಉಪಸ್ಥಿತರಿದ್ದರು.