ಕಾಸರಗೋಡು, ಜೂ 06 (DaijiworldNews/HR): ಕೂಲಿ ಕಾರ್ಮಿಕನ ಮೃತದೇಹ ಶಾಲಾ ಪರಿಸರವೊಂದರಲ್ಲಿ ಪತ್ತೆಯಾದ ಘಟನೆ ಪೆರ್ಲದಲ್ಲಿ ನಡೆದಿದ್ದು, ನಿಗೂಢ ಸಾವಿನ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
img src=https://daijiworld.ap-south-1.linodeobjects.com/Linode/img_tv247/hr-060622-kas1.jpg>
ಏಳ್ಕಾನ ಬಾಳೆಗುಳಿಯ ಜನಾರ್ಧನ ನಾಯ್ಕ್ ( 46) ಮೃತಪಟ್ಟವರು.
ಜನಾರ್ಧನ ನಾಯ್ಕ್ ಭಾನುವಾರ ಪೆರ್ಲ ಪೇಟೆಗೆ ತೆರಳಿದ್ದು, ಬಳಿಕ ಮನೆಗೆ ಬಂದಿರಲಿಲ್ಲ. ಈ ನಡುವೆ ಶಾಲಾ ಪರಿಸರದಲ್ಲಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದು, ತಲೆಯಿಂದ ರಕ್ತ ಹರಿಯುತ್ತಿತ್ತು ಎನ್ನಲಾಗಿದೆ.
ಇನ್ನು ಬದಿಯಡ್ಕ ಠಾಣಾ ಪೊಲೀಸರು ಮೃತದೇಹವನ್ನು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಗೆ ಕೊಂಡೊಯ್ಯಲಾಯಿತು.