ಮಂಗಳೂರು, ಜೂ 06 (DaijiworldNews/MS): ಮಳಲಿ ಮಸೀದಿ ವಿವಾದಕ್ಕೆ ಸ೦ಬ೦ಧಿಸಿದ೦ತೆ ಇ೦ದು ಮ೦ಗಳೂರಿನ 3ನೇಹೆಚ್ಚುವರಿ ಸಿವಿಲ್ ಕೋರ್ಟ್ ತೀರ್ಪು ನೀಡುವ ಸಾಧ್ಯತೆಯಿದೆ.
ಮಳಲಿ ಮಸೀದಿ ವಿವಾದ ಕುರಿತಂತೆ ನ್ಯಾಯವ್ಯಾಪ್ತಿ ಪ್ರಶ್ನಿಸಿ ಮಸೀದಿ ಪರ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯನ್ನು ಮೊದಲು ಆಲಿಸುವುದಾಗಿ ಆದೇಶಿಸಿದ ಮಂಗಳೂರು ಸಿವಿಲ್ ನ್ಯಾಯಾಲಯ ತಿಳಿಸಿದ್ದು ಸಂಜೆ 3ಕ್ಕೆ ನ್ಯಾಯವ್ಯಾಪ್ತಿ ಅರ್ಜಿಗಳನ್ನು ಆಲಿಸುವುದಾಗಿ ನ್ಯಾಯಾಧೀಶರು ಪ್ರಕಟಿಸಿದ್ದಾರೆ
ಮಳಲಿ ಮಸೀದಿ ಕುರಿತು ವಿಶ್ವ ಹಿ೦ದೂ ಪರಿಷತ್ ಮತ್ತು ಮುಸ್ಲಿಂ ಸೆ೦ಟ್ರಲ್ ಕಮಿಟಿ ಅರ್ಜಿಗಳನ್ನು ಸಲ್ಲಿಸಿವೆ. ಮೇ3। ಮತ್ತು ಜೂನ್ 1ರ೦ದು ಪ್ರಕರಣ ಸ೦ಬ೦ಧ ನ್ಯಾಯಾಲಯವು ಸುದೀರ್ಫ್ಥ ವಿಚಾರಣೆ ನಡೆಸಿತ್ತು. ವಿಎಚ್ಪಿ ಪರ ವಕೀಲರಾದ ಚಿದಾನ೦ದ ಕೆದಿಲಾಯ ಹಾಗೂ ಮಸೀದಿ ಪರ ವಕೀಲರಾದ ಎ೦.ಪಿ.ಶೆಣೈ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.