ಉಡುಪಿ, ಜ 11(MSP): ಉಡುಪಿ. ದ.ಕನ್ನಡ ಮತ್ತು ಉ.ಕನ್ನಡ ಜಿಲ್ಲೆಗಳಲ್ಲಿ ಅನೇಕ ಸುಂದರ ರಮಣೀಯ ಸ್ಥಳಗಳಿದ್ದು, ಇವುಗಳನ್ನು ಹೆಲಿಕಾಪ್ಟರ್ ಮೂಲಕ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು, ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಹೆಚ್ಚಿನ ಅವಕಾಶಗಳಿದ್ದು, 3 ಜಿಲ್ಲೆಗಳಿಗೆ ಸಂಬಂದಿಸಿದಂತೆ ಉಡುಪಿಯಲ್ಲಿ ಹೆಲಿಟೂರಿಸಂ ಕೇಂದ್ರೀಕೃತವಾಬೇಕು ಎಂದು ಉಡುಪಿ ಶಾಸಕ ರಘುಪತಿ ಶಾಸಕ ರಘುಪತಿ ತಿಳಿಸಿದ್ದಾರೆ.
ಅವರು ಶುಕ್ರವಾರ, ಆದಿ ಉಡುಪಿ ಹೆಲಿಪ್ಯಾಡ್ನಲ್ಲಿ ಆರಂಭವಾದ 3 ದಿನಗಳ ಹೆಲಿ ಟೂರಿಸಂ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ. ದ.ಕನ್ನಡ ಮತ್ತು ಉ.ಕನ್ನಡ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಈ 3 ಜಿಲ್ಲೆಗಳ ನಡುವೆ ಹೆಲಿ ಟೂರಿಸಂ ಆರಂಭಿಸಿ, ಉಡುಪಿಯನ್ನು ಕೇಂದ್ರಸ್ಥಳ ಮಾಡಬೇಕು, ಆ ಮೂಲಕ ಜಿಲ್ಲೆಯಲ್ಲಿ ಪ್ರವಾಸೋಧ್ಯಮವನ್ನು ಅಭಿವೃದ್ದಿ ಪಡಿಸಲು ಸಾಧ್ಯವಿದೆ ಎಂದು ರಘುಪತಿ ಭಟ್ ಹೇಳಿದರು.
ಹೆಲಿ ಟೂರಿಸಂ ಆಯೋಜಕರಾದ ಸುದೇಶ್ ಶೆಟ್ಟಿ ಮಾತನಾಡಿ, ಉಡುಪಿಯಲ್ಲಿ ಜನವರಿ 11 ರಿಂದ 13 ರ ವರೆಗೆ ಹೆಲಿ ಟೂರಿಸಂ ನಡೆಯಲಿದ್ದು, 8 ನಿಮಿಷದ ಸಾಮಾನ್ಯ ಹಾರಾಟ, 10 ನಿಮಿಷದ ಅಡ್ವೆಂಚರ್ ಹಾರಾಟ ಮತ್ತು 13 ನಿಮಿಷಗಳ ದೀರ್ಘ ಹಾರಾಟದ ಪ್ಯಾಕೇಜ್ ಗಳಿದ್ದು, ದೂ.9741248716, 9741249238 ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದು ಮತ್ತು ಆದಿ ಉಡುಪಿ ಹೆಲಿಪ್ಯಾಡ್ ಬಳಿ ಸ್ಥಳದಲ್ಲೇ ಬುಕಿಂಗ್ ಅವಕಾಶವಿದೆ, ಒಮ್ಮೆ 6 ಮಂದಿ ಹಾರಾಟ ನಡೆಸಬಹುದಾಗಿದೆ, 2 ವರ್ಷದೊಳಗಿನ ಮಕ್ಕಳಿಗೆ ಉಚಿತ, ಉಡುಪಿಯಲ್ಲಿ ಇದು 4 ನೇ ವರ್ಷ ಈ ಕಾರ್ಯಕ್ರಮ ಆಯೋಜಿಸಿದ್ದು, ಪ್ರತಿ ಬಾರಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಚಿಪ್ಸನ್ ಏವಿಯೇಷನ್ ಸಂಸ್ಥೆಯ ಪೈಲೆಟ್ ರಮೇಶ್ ಭೂಮಿನಾಥ್ ಮಾತನಾಡಿ, ಸಾರ್ವಜನಿಕರು ಹೆಲಿ ಕ್ಯಾಪ್ಟರ್ ಹಾರಾಟದ ಅನುಭವವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು