ಬಂಟ್ವಾಳ, ಜೂ 03 (DaijiworldNews/MS): ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಿ. ಮೂಡಾ ಗ್ರಾಮದ ಬಿ. ಸಿ ರೋಡ್ ನ ಶರವು ರಿಕ್ರೀಯೆಷನ್ ಕ್ಲಬ್ ಗೆ ದಾಳಿ ನಡೆಸಿದ ಬಂಟ್ವಾಳ ಪೊಲೀಸರು 28 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ರವರು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ ವಶಕ್ಕೆ ಅಕ್ರಮ ಜೂಜಾಟಕ್ಕೆ ಬಳಸಿದ 26900/- ರೂ ಹಣವನ್ನು ಹಾಗೂ ಒಂದು ಟೇಬಲ್, ಆರು ಚೇರ್, 52 ಇಸ್ಪಿಟ್ ಹಾಳೆಗಳನ್ನು ಪಂಚರ ಸಮಕ್ಷಮ ಸ್ವಾಧೀನ ಪಡಿಸಿಕೊಂಡು ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪೊಲೀಸರಿಗೆ ಹೆದರಿದ ಆರೋಪಿಗಳು ಕಟ್ಟಡದ ಮೇಲ್ಭಾಗ ದಿಂದಲೇ ಆಟಕ್ಕೆ ಬಳಸಿದ ಹಣವನ್ನು ನೋಟುಗಳನ್ನು ಕೆಳಗೆ ಬಿಸಾಕಿದ್ದಾರೆ. ಒಮ್ಮಿಂದೊಮ್ಮೆಲೆ ಬಿದ್ದ ನೋಟುಗಳನ್ನು ಹೆಕ್ಕಲು ಕೆಲವರು ಮುಂದಾದ ಹಿನ್ನೆಲೆಯಿಂದ ಸರ್ವೀಸ್ ರಸ್ತೆಯಲ್ಲಿ ಕೆಲ ಕಾಲ ವಾಹನ ದಟ್ಟಣೆ ಉಂಟಾಯಿತು.