ಮಂಗಳೂರು, ಜೂ. 03 (DaijiworldNews/DB): ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ರದ್ದುಗೊಂಡಿದ್ದ ಮಂಗಳೂರು-ದೆಹಲಿ ನೇರ ವಿಮಾನ ಸಂಚಾರ ಜುಲೈ 1ರಿಂದ ಪುನರಾರಂಭವಾಗಲಿದೆ.
ಇಂಡಿಗೋ ವಾಯುಯಾನ ಕಂಪನಿಯ ತಡೆರಹಿತ ವಿಮಾನವು ಮಂಗಳೂರಿನಿಂದ ದೆಹಲಿಗೆ ವಾರದಲ್ಲಿ ನಾಲ್ಕು ಬಾರಿ ಸಂಚಾರ ನಡೆಸಲಿದೆ. ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಮಂಗಳೂರು-ದೆಹಲಿ ನಡುವಿನ ನೇರ ವಿಮಾನ ಸೇವೆ ಲಭ್ಯವಿರುತ್ತದೆ.
ಕೊರೊನಾದಿಂದಾಗಿ ನೇರ ವಿಮಾನ ಸೌಲಭ್ಯ ರದ್ದಾದ ಬಳಿಕ ಮಂಗಳೂರು-ದೆಹಲಿ ನಡುವೆ ಸಂಚರಿಸಬೇಕಾದ ಪ್ರಯಾಣಿಕರ ಪ್ರಯಾಣ ತೀರಾ ತ್ರಾಸದಾಯಕವಾಗಿತ್ತು. ಪ್ರಯಾಣಿಕರು ಮಂಗಳೂರಿನಿಂದ ಬೆಂಗಳೂರು, ಚೆನ್ನೈ, ಪುಣೆ ಮುಂಖಾಂತರ ದೆಹಲಿಗೆ ತೆರಳಬೇಕಾದ ಅನಿವಾರ್ಯತೆ ಕಳೆದೆರಡು ವರ್ಷಗಳಿಂದ ಎದುರಾಗಿತ್ತು. ಇದರಿಂದ ವಿಮಾನಕ್ಕೆ ಅಧಿಕ ವೆಚ್ಚ ತೆರಬೇಕಾಗಿತ್ತು. ಇದೀಗ ನೇರ ವಿಮಾನಯಾನ ಪುನರಾರಂಭವಾಗಲಿರುವುದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.