ಪಡುಬಿದ್ರಿ, ಜೂ 03 (DaijiworldNews/MS): ಉಚ್ಚಿಲ ಭಾಸ್ಕರ ನಗರ ಜುಮ್ಮಾ ಮಸೀದಿ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಕಸಾಯಿಖಾನೆಗೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳು, ಒಂದು ಜೀವಂತ ಹಸು, ಮಾಂಸಕ್ಕೆ ಕಡಿಯಲಾದ ಹಸು ಹಾಗೂ ಮಾರಾಟಕ್ಕೆ ಕಡಿಯಲಾಗಿದ ಮಾಂಸವನ್ನು ಗುರುವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
ಉಚ್ಚಿಲ ಭಾಸ್ಕರ ನಗರದಲ್ಲಿ ಸಬಾನ್ ಎಂಬವರ ಮನೆಯಲ್ಲಿ ಈ ಕಸಾಯಿಕಾನೆ ಇದ್ದು, ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಮಹಮ್ಮದ್ ರಫೀಕ್, ಇಲಿಯಾಸ್, ಮಹಮ್ಮದ್ ಮೋಹಿದ್ದೀನ್, ಮೊಯ್ದಿನಬ್ಬ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ದಿಯು ರಫೀಕ್ ಎಂಬಾತ ಪರಾರಿಯಾಗಿದ್ದಾನೆ. ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ ಹಾಗೂ ಪಡುಬಿದ್ರಿ ಪೊಲೀಸರು ಭಾಗವಹಿಸಿದ್ದಾರೆ.