ಮಂಗಳೂರು, ಜೂ 02 (DaijiworldNews/SM): ಮಹಾನಗರ ಪಾಲಿಕೆಯ ಕಾರ್ಯ ಪಾಲಕ ಇಂಜಿನಿಯರೊಬ್ಬರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯ ಪಾಲಕ ಇಂಜಿನಿಯರ್ ಅತಿಕ್ ರೆಹಮಾನ್ ಇವರು 3 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಲಂಚ ಸ್ವೀಕರುತ್ತಿದ್ದ ಸಂದರ್ಭ ವಶಕ್ಕೆ ಪಡೆದುಕೊಂಡಿದ್ದಾರೆ. ದೇರೆಬೈಲು ಕೊಂಚಾಡಿಯ ಜಯಲಿಂಗಪ್ಪ ಎಂಬವರು ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎ.ಸಿ.ಬಿ ಪಶ್ಚಿಮ ವಲಯದ ಪೊಲೀಸ್ ಅದೀಕ್ಷಕರಾದ.ಸಿ.ಎ ಸೈಮನ್ ಅವರ ಮಾರ್ಗದರ್ಶನದಲ್ಲಿ ಎಸಿಬಿ ಪೊಲೀಸ್ ಠಾಣೆ ದಕ್ಷಿಣ ಕನ್ನಡ ಜಿಲ್ಲೆ ಯ ಪೊಲೀಸ್ ಉಪಾದೀಕ್ಷಾರಾದ ಕೆ.ಸಿ.ಪ್ರಕಾಶ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಗುರುರಾಜ್, ಶ್ಯಾಮ್ ಸುಂದರ್ ಹೆಚ್ ಎಂ ಹಾಗೂ ಸಿಬ್ಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ ಕೆ,ರಾಧಾಕೃಷ್ಣ ಡಿ.ಎ, ಉಮೇಶ್,ವೈಶಾಲಿ, ಗಂಗಣ್ಣ,ಆದರ್ಶ,ರಾಕೇಶ್, ಭರತ್, ಮೋಹನ್ ಸಾಲಿಯಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.