ಮಂಗಳೂರು, ಜೂ 02 (DaijiworldNews/SM): ಎನ್ ಎಸ್ ಯುಐ ನಾಯಕರ ಬಂಧನ ವಿರೋಧಿಸಿ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಎನ್ ಎಸ್ ಯುಐ ಪಕ್ಷದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎನ್ ಎಸ್ ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಸಚಿವರ ಮನೆಗೆ ಮುತ್ತಿಗೆ ಎಂದು ಸುಳ್ಳು ಕೇಸು ಹಾಕಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಎನ್ ಎಸ್ ಯುಐ ನಾಯಕರನ್ನು ಬಂಧಿಸಿದ್ದಾರೆ. ರಾಜ್ಯ ಸರಕಾರ ಪ್ರತಿಭಟನೆ ಹಕ್ಕನ್ನು ದಮನಿಸುತ್ತಿರುವುದು ಸರಿಯಲ್ಲ. ಬಂಧಿತ ನಾಯಕರನ್ನು ಸರಕಾರ ತಕ್ಷಣವೇ ಬಿಡುಗಡೆಗೊಳಿಸಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಬೆಂಕಿ ಹಚ್ಚುವ ಸಂಸ್ಕೃತಿ ಎನ್ ಎಸ್ ಯುಐ, ಕಾಂಗ್ರೆಸ್ ನದ್ದಲ್ಲ. ಬೆಂಕಿ ಹಚ್ಚುತ್ತೇವೆ ಎಂದಿದ್ದು ಸಂಸದ ನಳಿನ್ ಕುಮಾರ್ ಕಟೀಲ್. ಬೆಂಕಿ ಹಚ್ಚುವುದು ಬಿಜೆಪಿಯ ಸಂಸ್ಕೃತಿಯಾಗಿದೆ. 24 ಗಂಟೆಯಲ್ಲಿ ಬಂಧಿತ ನಾಯಕರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.