ಮಂಗಳೂರು ಅ 23: ಎನ್.ಎಸ್.ಯು.ಐ.ನಿಂದ ಮಾದಕ ದ್ರವ್ಯ ವಿರೋಧಿ ಅಭಿಯಾನಮಂಗಳೂರು ಅ: ಎನ್.ಎಸ್.ಯು.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಇದರ ವತಿಯಿಂದ ಅಕ್ಟೋಬರ್ 2 ರಿಂದ ನವೆಂಬರ್ 10 ರವರೆಗೆ ನಡೆಯಲಿರುವ ಮಾದಕ ದ್ರವ್ಯ ವಿರೋಧಿ ಅಭಿಯಾನ ದ ಪೋಸ್ಟರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮಿನಿ ವಿಧಾನ ಸೌಧದಲ್ಲಿ ಅ, 22 ರ ರವಿವಾರ ಬಿಡುಗಡೆಗೊಳಿಸಿದರು. ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಎನ್.ಎಸ್.ಯು.ಐ ನ ಮಹಮ್ಮದ್ ಸವಾದ್ , ಮಾದಕ ದ್ರವ್ಯ ವಿರೋಧಿ ಅಭಿಯಾನಯೂ ವಿದ್ಯಾರ್ಥಿಗಳಿಗೆ ಜಾಗೃತಿಗಾಗಿ ಮೂಡಿಸಲು ಉದ್ದೇಶಿದ್ದು ನಾಳೆ ಸಚಿವ ಜೆ ಆರ್ ಲೋಬೊ. ನಗರದ ಅಲೋಶಿಯಸ್ ಕಾಲೇಜಿನಲ್ಲಿ ಸೆಮಿನಾರ್ ಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.