ಬೆಳ್ತಂಗಡಿ, ಜೂ 02 (DaijiworldNews/MS): ಇಲ್ಲಿನ ಗೇರುಕಟ್ಟೆ ಸಮೀಪದ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟ 12 ಕ್ವಿಂಟಾಲ್ ಗೂ ಅಧಿಕ ಅನ್ನಭಾಗ್ಯ ಪಡಿತರವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಬುಧವಾರ ವಶಕ್ಕೆ ಪಡೆಯಲಾಗಿದೆ.
ಗೇರುಕಟ್ಟೆ ಸಮೀಪದ ಎಸ್.ವಿ. ಟ್ರೇಡರ್ಸ್ ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ವಾಹನದಲ್ಲಿ ಸಾಗಾಟಕ್ಕೆ ಮಾಡಲು ಯತ್ನಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ. 24 ಚೀಲಗಳಲ್ಲಿ ತಲಾ 50 ಕೆಜಿಯಂತೆ ಜಪ್ತಿ ವೇಳೆ 12 ಕ್ವಿಂಟಾಲ್ ಗೂ ಅಕ್ಕಿಯನ್ನು ವಾಹನದಲ್ಲಿ ಹೇರಲಾಗಿತ್ತು . ವಶಕ್ಕೆ ಪಡೆದ ಅಕ್ಕಿ ಮೌಲ್ಯದ 18 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಅಧಿಕ ಪಡಿತರ ಕಂಡುಬಂದಿದೆ.
ಕೊಕ್ಕಡ ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ, ಕಳಿಯ ಗ್ರಾಮ ಲೆಕ್ಕಿಗ ಪ್ರಥ್ವಿರಾಜ್ , ಚಾಲಕ ಸಂತೋಷ್ ಕುಮಾರ್ ಕಾರಾಚರಣೆಯಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಎಸ್.ಐ. ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.