ಕಾರ್ಕಳ, ಜೂ 02 (DaijiworldNews/MS): ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಯಲ್ಲಿ ಖರೀಧಿಸಿ ಅದಕ್ಕೆ ಪಾಲಿಶ್ ಹಾಕಿ ಅಧಿಕ ಬೆಲೆಯ ಮಾರಾಟ ಮಾಡುತ್ತಿದ್ದ ಜಾಲವೊಂದು ಕಾರ್ಕಳ ತಾಲೂಕು ನೀರೆ ಗ್ರಾಮ ಪಂಚಾಯತ್ನ ಕಣಜಾರ್ ಶೆಮೆಗುರಿ ಎಂಬಲ್ಲಿ ಪತ್ತೆ ಹಚ್ಚಲಾಗಿದೆ.
ಬೈಲೂರಿನ ಮಹಮ್ಮದ್ ಅಭ್ದುಲ್ ರಹಮಾನ್(35) ಪ್ರಕರಣದ ಆರೋಪಿ. ಪಡಿತರ ಅಕ್ಕಿಯನ್ನು ಪಡಕೊಳ್ಳುವ ಮನೆಯವರಿಗೆ ಒಂದಿಷ್ಟು ಹೆಚ್ಚು ಬೆಲೆ ನೀಡಿ ಆ ಅಕ್ಕಿಯನ್ನು ಮಿಲ್ಗೆ ಸರಬರಾಜು ಮಾಡಿ ಪಾಲಿಶ್ ಮಾಡಿ ದಿನಸಿ ಅಂಗಡಿಗಳಿಗೆ ಅಧಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮಾಹಿತಿ ತಿಳಿದ ನೀರೆ ಪಂಚಾಯತ್ ಸದಸ್ಯ ಸಚ್ಚಿದಾನಂದ ಪ್ರಭುರವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ಅವರಿಗೆ ಮಾಹಿತಿಯ ಮೂಲಕ ದೂರು ನೀಡಿದರು.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಗೂ ಹಿರಿಯಡ್ಕ ಎಸ್ ಐ ಅಗಮಿಸಿ ಘಟನಾ ಸ್ಥಳದಲ್ಲಿ ಆರೋಪಿತನನ್ನು ವಿಚಾರಣೆ ಒಳಪಡಿಸಿದರು.
ನೀರೆ ಹಾಗೂ ಕಣಜಾರ್ ಗ್ರಾಮದ ಬಿ ಪಿ ಎಲ್ ಕುಟುಂಬದವರಿಗೆ ಪ್ರತಿ ಕುಟುಂಬದವರಿಗೆ ತಿಂಗಳಿಗೆ ೫೦ ಕೆಜಿ ಅಕ್ಕಿ ಸಿಗುತ್ತಿದ್ದು ಅದನ್ನು ಮನೆಯವರು ಆರೋಪಿತನಿಗೆ ಮಾರುತ್ತಿದ್ದರು. ಆರೋಪಿತನು ಆ ಅಕ್ಕಿಯನು ಮಿಲ್ಗೆ ನೀಡಿ ಪಾಲಿಶ್ ಮಾಡಿ, ಅದನ್ನು ಜೀನಸು ಅಂಗಡಿಗೆ ಮಾರಾಟ ಮಾಡುತ್ತಿದ್ದು, ಗ್ರಾಹಕರು ಅಧಿಕ ಬೆಲೆ ನೀಡಿ ಪಾವತಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ದಂಧೆಯಲ್ಲಿ ತೊಡಗಿಸಿಕೊಂಡಿರುವ ಹಲವರು ಮಂದಿ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಋಚರಿಸುತ್ತಿರು ಅಂಶ ಇದೇ ವೇಳೆಗೆ ಬೆಳಕಿಗೆ ಬಂದಿದೆ. ಫುಡ್ ಇನ್ಸ್ಪೆಕ್ಟರ್ ಸುಮತಿ ಭೇಟಿ ನೀಡಿ ಕೇಸ್ ದಾಖಲಿಸಿದ್ದಾರೆ. ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ. ಉಪಾಧ್ಯಕ್ಷ ಸತೀಶ್ ಸದಸ್ಯರು ಶಿವಪ್ರಸಾದ್,ವಿದ್ಯಾ, ಮಾಜಿ ಸದಸ್ಯರು ರಘುರಾಮ್ ಶೆಟ್ಟಿ , ಗ್ರಾಮ ಕಾರಣಿಕ ಸುಚಿತ್ರಾ ಸ್ಥಳೀಯ ಗ್ರಾಮಸ್ಥರಾದ ಯೋಗೀಶ್ ಮಡಿವಾಳ್ ಸ್ಥಳದಲ್ಲಿದ್ದರು. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸುದಾಖಲಾಗಿದೆ.