ಮೂಡುಬಿದಿರೆ, ಜೂ 01 (DaijiworldNews/SM): ರೈತ ವಿದ್ಯಾರ್ಥಿ ನಿಧಿ ಪಡೆದ ವಿದ್ಯಾರ್ಥಿಗಳು ರೈತರಾಗಿ ಮುಂದುವರೆಯಬೇಕೆಂದು ವಿದ್ಯಾರ್ಥಿಯೋರ್ವ ಪಟ್ಟು ಹಿಡಿದ ಘಟನೆ ಇಲ್ಲಿನ ಆಳ್ವಾಸ್ ಕಾಲೇಜು ಸಭಾಂಗಣದಲ್ಲಿ ನಡೆದಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಭಾಷಣ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವ ವೇದಿಕೆಯತ್ತ ಮುನ್ನುಗಿದ್ದಾನೆ. ಏಕಾಏಕಿ ಸಿಎಂ ಭಾಷಣ ಮಾಡುತ್ತಿದ್ದಾಗ ವೇದಿಕೆಯತ್ತ ಆಗಮಿಸಿ ಮುಖ್ಯಮಂತ್ರಿಗಳ ಬಳಿ ಮಾತನಾಡಬೇಕು ಎಂದು ವಿದ್ಯಾರ್ಥಿ ಪಟ್ಟು ಹಿಡಿದಿದ್ದ. ಅಲ್ಲದೆ ವೇದಿಕೆ ಬಳಿ ತೆರಳಲು ಪ್ರಯತ್ನಿಸಿದ್ದ. ರಾಯಚೂರು ಮೂಲದ ಮಂಗಳೂರು ವಿವಿ ಘಟಕ ಕಾಲೇಜು ವಿದ್ಯಾರ್ಥಿ ಶಂಕರ್ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಬೇಡಿಕೆ ಇಟ್ಟ ವಿದ್ಯಾರ್ಥಿಯಾಗಿದ್ದಾನೆ.
ಎಲ್ಲರೂ ರೈತ ವಿದ್ಯಾರ್ಥಿ ನಿಧಿ ಪಡೆದು ಬೇರೆ ಬೇರೆ ಪ್ರೋಫೆಷನ್ ಗೆ ಹೋಗುವ ಬಗ್ಗೆ ಹೇಳುತ್ತಿದ್ದಾರೆ. ಆದ್ರೆ ರೈತರಾಗಬೇಕು ಅಂತಾ ಯಾರು ಹೇಳುತ್ತಿಲ್ಲ. ನಾನು ಅದರ ಬಗ್ಗೆ ಸಿಎಂ ಜೊತೆ ಮಾತನಾಡಲು ಇಚ್ಚಿಸಿದ್ದು, ಮುಖ್ಯಮಂತ್ರಿಗಳು ಇದಕ್ಕೊಂದು ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾನೆ. ಈ ವೇಳೆ ಸಚಿವ ಆರ್.ಅಶೋಕ್ ವಿದ್ಯಾರ್ಥಿ ಮಾತು ಕೇಳಿದ್ದಾರೆ. ಹಾಗೂ ಆತನ ಅಭಿಪ್ರಾಯಕ್ಕೆ ಮನ್ನಣೆ ನೀಡುವುದಾಗಿ ತಿಳಿಸಿದ್ದಾರೆ.