ಕಾರ್ಕಳ, ಜೂ 01 (DaijiworldNews/MS): ಲೋಕಸೇವಾ ಆಯೋಗ ( ಯುಪಿಎಸ್ಸಿ) ನಡೆಸಿದ ಪರೀಕ್ಷೆಯಲ್ಲಿ ಕಾರ್ಕಳದ ಜರಿಗುಡ್ಡೆಯ ಮೊಹಮ್ಮದ್ ಶೌಕತ್ ಅಝೀಂ 545ನೇ ರ್ಯಾಂಕ್ ಗಳಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳದ ಎಸ್ವಿಟಿಶಾಲೆಯಲ್ಲಿ ಪೂರೈಸಿದ್ದಾರೆ. ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಕೆ.ಎಂ.ಇ.ಎಸ್ ಕಾಲೇಜಿನಲ್ಲಿ , ಮೂಡಬಿದಿರೆ ಮಿಜಾರಿನ ಮೈಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ.
ಯುಪಿಸ್ ಸಿ ಪರೀಕ್ಷೆಯನ್ನು ಬರೆಯಬೇಕೆಂಬ ಹಂಬಲದಲ್ಲಿದ್ದಾಗ ಕರ್ನಾಟಕ ಸರಕಾರ ವತಿಯಿಂದ ಯುಪಿಎಸ್ಸಿ ಪರಿಕ್ಷೆ ತರಬೇತಿಗೆ ಆಯ್ಕೆಯಾಗಿ ಪ್ರತಿ ತಿಂಗಳು ರೂ. 10ಸಾವಿರ ಪ್ರೋತ್ಸಾಹಧನದೊಂದಿಗೆ ತರಬೇತಿ ಪಡೆದರು.
ಪ್ರಥಮ ಬಾರಿ 2016ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದಿದ್ದರು. ಸತತ ಏಳನೆ ಪ್ರಯತ್ನದಲ್ಲಿ ಫಲವಾಗಿ ಉತ್ತಮ ಯಶಸ್ಸು ಕಂಡಿದ್ದಾರೆ. 2021ರ ಲೋಕಸೇವಾ ಆಯೋಗವು ದೇಶದಾದ್ಯಂತ 685 ಅಭ್ಯರ್ಥಿಗಳು ಆಯ್ಕೆ ಮಾಡಿದೆ. ಅದರಲ್ಲೂ 545ನೇ ರ್ಯಾಂಕ್ ನೊಂದಿಗೆ ಕರ್ನಾಟಕದಲ್ಲಿ ಆಯ್ಕೆಯಾದವರಲ್ಲಿ ಇವರೂ ಓರ್ವರು.
ಕಾರು ಚಾಲನ ಮಗ
ಬಡ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವರು ಮೊಹಮ್ಮದ್ ಶೌಕತ್ ಅಝೀಂ . ತಂದೆ ಶೇಕ್ ಅಬ್ದುಲ್ ವೃತ್ತಿಯಲ್ಲಿ ವಾಹನ ಚಾಲಕರು. .ತಾಯಿ ಮೈಮುನಾ ಬೀಡಿಕಟ್ಟಿ ಸಂಸಾರ ಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಎಷ್ಟೇ ಕಷ್ಟ ಎದುರಾದರೂ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಡಕಾದ ರೀತ್ಯಾದಲ್ಲಿ ಜೀವನ ನಿರ್ವಹಿಸಿರುವ ಫಲವಾಗಿ ಇದೀಗ ಆ ಮನೆಯಲ್ಲಿ ಸಂತಸ ವಾತಾವರಣ ಮೂಡಲು ಕಾರಣವಾಗಿದೆ.
ಸಾಧಕನ ಮಾತು
ಮನಸ್ಸಿದ್ದರೆ ಮಾರ್ಗವಿದೆ. ಛಲವಿದ್ದರೆ ಯಾವುದೇ ಗುರಿ ತಲುಪಬಹುದು. ಇಷ್ಟಪಟ್ಟಾಗ ಕಷ್ಟದ ಅರಿವು ಆಗುವುದಿಲ್ಲ ಎಂಬ ಮಾತನ್ನು ಹೇಳುವ ಮೊಹಮ್ಮದ್ ಶೌಕತ್ ಅಝೀಂಯ ಯಶಸ್ಸಿಗೆ ಹೆತ್ತವರೇ ಪ್ರೇರಣಾ ಕರ್ತರಾಗಿದ್ದಾರೆ. ಪ್ರತಿನಿತ್ಯ ಐದು ಘಂಟೆ ಸತತವಾಗಿ ಪರೀಕ್ಷಾ ಪೂರ್ವ ತಯಾರಿಯಲ್ಲಿ ಸಕ್ರಿಯನಾಗಿದೆ. ಸಾಮಾಜಿಕ ಜ್ಞಾನವು ನನ್ನ ಓದಿಗೆ ಉತ್ತೇಜನ ನೀಡಿದೆ. ಕಂದಾಯ , ಲೆಕ್ಕ ಪರಿಶೋಧನೆ ವಿಭಾಗದಲ್ಲಿ ಆಯ್ಕೆಯಾಗುವ ಸಾದ್ಯತೆಯಿದೆ. ಎರಡು ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಮೂಲಕ ಭವಿಷ್ಯದ ಬದುಕು ರೂಪುಗೊಳ್ಳಲಿದೆ ಎಂಬ ಆಶಾಭಾವನೆ ಮೊಹಮ್ಮದ್ ಶೌಕತ್ ಅಝೀಂ ಅವರದಾಗಿದೆ.