ಉಡುಪಿ, ಮೇ 31 (DaijiworldNews/SM): ಮೇಲ್ನೋಟದ ಲೆಕ್ಕಾಚಾರದಲ್ಲೇ ನಾವು ಗೆಲ್ಲುತ್ತೇವೆ. ಮುಂದೆ ಚುನಾವಣೆ ಇದೆ ಏನೇನಾಗುತ್ತೆ ನೋಡೋಣ. ಏನೇನು ಬೆಳವಣಿಗೆಯಾಗುತ್ತದೆ ಕಾದು ನೋಡೋಣ. ಎರಡನೇ ಪ್ರಾಶಸ್ತ್ಯದ ಮತಗಳನ್ನು ಲೆಕ್ಕ ಹಾಕಿದಾಗ ನಮಗೆ ಸರಳ ಬಹುಮತ ಸಿಗುವ ಅವಕಾಶ ಇದೆ, ಎಂದು ಮುಖ್ಯ ಮಂತ್ರಿ ಬೊಮ್ಮಾಯಿ ಉಡುಪಿಯಲ್ಲಿ ಮಂಗಳವಾರ ತಿಳಿಸಿದರು
ರಾಜ್ಯಸಭಾ ಚುನಾವಣೆಗೆ, ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಿಜೆಪಿ ಕುರಿತಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿಯಲ್ಲಿ 32 ಮಂದಿ ಮತ್ತು ಜೆಡಿಎಸ್ ನಲ್ಲಿ ೩೨ ಹೆಚ್ಚುವರಿಯಾಗಿ ಮಂದಿ ಇದ್ದಾರೆ. ಎಲ್ಲಾ ಕಡೆ ಬಹಳಷ್ಟು ಸ್ನೇಹಿತರಿದ್ದಾರೆ. ಕಾಂಗ್ರೆಸ್ನಲ್ಲಿ ಜೆಡಿಎಸ್ ನಲ್ಲಿ ಸಾಕಷ್ಟು ಹಳೆಯ ಸ್ನೇಹಿತರಿದ್ದಾರೆ. ಈವರಿಗೆ ಯಾರ ಜೊತೆಗೂ ಮಾತುಕತೆ ಮಾಡಿಲ್ಲನಾಮಪತ್ರ ಸಲ್ಲಿಕೆ ಮಾಡಿ ನೇರವಾಗಿ ಉಡುಪಿಗೆ ಬಂದಿದ್ದೇನೆ ಈವರೆಗೆ ಇನ್ನೂ ಮಾತುಕತೆ ಆಗಿಲ್ಲ ಎಂದು ಅವರು ಹೇಳಿದರು.
ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಪೂರೈಕೆ ವಿಚಾರ ಕುರಿತಾಗಿ ಉತ್ತರಿಸಿದ ಸಿಎಂ ಈ ಬಗ್ಗೆ ನಾನು ಇವತ್ತು ಆದೇಶ ಮಾಡಿದ್ದೇನೆ.ಕೂಡಲೇ ಪಠ್ಯಪುಸ್ತಕ ವಿತರಿಸುವ ಕೆಲಸ ಆಗುತ್ತದೆ, ಎಂದರು. ಇತ್ತೀಚೆಗೆ ಕುಂದಾಪುರದ ಶಿಲ್ಪಾ ದೇವಾಡಿಗ ಆತ್ಮಹತ್ಯೆ ವಿಚಾರ ವಾಗಿ, ಉತ್ತರಿಸಿದ ಲವ್ ಜಿಹಾದ್ ಪ್ರಕರಣವನ್ನು ಗೃಹ ಇಲಾಖೆ ನೋಡಿಕೊಳ್ಳುತ್ತದೆ ಎಂದರು.
ಉಡುಪಿಯಲ್ಲಿ ಬುಧವಾರದಂದು ಬೇರೆ ಬೇರೆ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ಸಿ ಎಂ ಮಣಿಪಾಲದ ಕಂಟ್ರಿ ಇನ್ ಹೋಟೇಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.