ಕಾಸರಗೋಡು, ಮೇ 31 (DaijiworldNews/SM): ಕೇರಳದಲ್ಲಿ ನಾಳೆಯಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ. ಎರಡು ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ಲಭಿಸಲಿದೆ.
ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಹಿನ್ನಲೆ ಯಲ್ಲಿ ಕಳೆದ ಕಳೆದ ಎರಡು ವರ್ಷಗಳಲ್ಲಿ ಐದು ತಿಂಗಳ ಕಾಲ ಮಾತ್ರ ಕೋವಿಡ್ ಮಾನದಂಡ ದಂತೆ ಶಾಲೆಗಳು ಕಾರ್ಯಚರಿ ಸಿದ್ದವು. ಆನ್ ಲೈನ್ ಮೂಲಕ ಎರಡು ವರ್ಷಗಳಲ್ಲಿ ವಿದ್ಯಾರ್ಥಿ ಗಳು ಶಿಕ್ಷಣ ಪಡೆದ ವಿದ್ಯಾರ್ಥಿ ಗಳಿಗೆ ಇದೀಗ ಶಾಲೆ ಗಳು ಶಾಲೆಯ ಮೆಟ್ಟಲೇರುತ್ತಿ ದ್ದಾರೆ. ಶಾಲೆ ಗಳಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಎಲ್ಲಾ ಶಾಲೆ ಗಳಲ್ಲಿ ಪ್ರವೇಶೋತ್ಸವ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗೆ ಈಗಾಗಲೇ ಶೇಕಡಾ 70 ರಷ್ಟು ಪಠ್ಯ ಪುಸ್ತಕ ವಿತರಣೆ ಪೂರ್ಣ ಗೊಂಡಿದೆ. ಜೂನ್ 15 ರೊಳಗೆ ಎಲ್ಲಾ ಪಠ್ಯ ಪುಸ್ತಕ ವಿತರಣೆ ಪೂರ್ಣಗೊಳಿಸ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಕನ್ನಡ ಪಠ್ಯ ಪುಸ್ತಕ ವಿತರಣೆ ವಿಳಂಬ ಗೊಂಡಿದ್ದು, ಮುದ್ರಣ ವಿಳಂಬ ಕಾರಣವಾಗಿದ್ದು, ಎರಡು ವಾರದೊಳಗೆ ಪೂರ್ಣ ಗೊಳಿಸುವ ನಿರೀಕ್ಷೆ ಶಿಕ್ಷಣ ಇಲಾಖೆ ಹೊಂದಿದೆ.