ಕಾಸರಗೋಡು, ಮೇ 31 (DaijiworldNews/SM): ನಿವೃತ್ತ ಶಿಕ್ಷಕಿ ಚಿಮೇನಿ ಪುಲಿಯನ್ನೂರಿನ ಜಾನಕಿ ಟೀಚರ್(65) ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳಿಗೆ ಜೀವಾವಧಿ ಸಜೆ ಹಾಗೂ 1. 25 ಲಕ್ಷ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಥಮ ಆರೋಪಿ ಪುಲಿಯನ್ನೂರು ಚಿರಿಕುಳದ ವಿಶಾಖ್(27) ಮತ್ತು ಮೂರನೇ ಆರೋಪಿ ಅರುಣ್(30)ಗೆ ಶಿಕ್ಷೆ ವಿಧಿಸಲಾಗಿದೆ. ಎರಡನೇ ಆರೋಪಿಯಾಗಿದ್ದ ರಿನಿಷ್(28) ವಿರುದ್ದದ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಖುಲಾಸೆ ಗೊಳಿಸಿದೆ. ದಂಡ ಮೊತ್ತವನ್ನು ಜಾನಕಿರವರ ಕುಟುಂಬಕ್ಕೆ ನೀಡುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 2017 ರ ಡಿಸಂಬರ್ 13 ರಂದು ರಾತ್ರಿ ಮುಸುಕುಧಾರಿಗಳಾಗಿ ಮನೆಗೆ ನುಗ್ಗಿದ ತಂಡವು ಜಾನಕಿಯ ರವರ ಕತ್ತು ಕೊಯ್ದು ಕೊಲೆಗೈಯ್ಯಲಾಗಿತ್ತು. ಬೊಬ್ಬೆ ಕೇಳಿ ಓಡಿ ಬಂದ ಪತಿ ಕೃಷ್ಣ ರವರ ನ್ನು ಮಾರಾಕಾಸ್ತ್ರದಿಂದ ಕಡಿದು ಗಾಯಗೊಳಿಸಿದ್ದರು.
ಆರೋಪಿಗಳಿಬ್ಬರು ಜಾನಕಿ ಟೀಚರ್ ರವರ ಶಿಷ್ಯರಾಗಿದ್ದರು. ಜಾನಕಿ ಟೀಚರ್ ರವರ ಶಾಲೆಯಲ್ಲಿ ಕಲಿತಿದ್ದರು. ಇದರಿಂದ ಜಾನಕಿ ಟೀಚರ್ ಗುರುತು ಪತ್ತೆ ಹಚ್ಚಿದ್ದು, ಇದರಿಂದ ಭಯಗೊಂಡು ಜಾನಕಿ ಟೀಚರ್ ರವರನ್ನು ಕೊಲೆಗೈಯ್ಯಲು ಕಾರಣ ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದರು.
ಕಳವುಗೈದ ಚಿನ್ನಾಭರಣವನ್ನು ಪಯ್ಯನ್ನೂರು, ಕಣ್ಣೂರು, ಮಂಗಳೂರು ಮೊದ ಲಾಡೆಗಳಲ್ಲಿ ಮಾರಾಟಮಾಡಿದ್ದರು ಪ್ರಾಸಿಕ್ಯೂಷನ್ ಪರ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ . ದಿನೇಶ್ ಕುಮಾರ್ ಹಾಜರಾದರು. ಜಾನಕಿ ಟೀಚರ್ ಪುಳಿಯನೂರು ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿದು ನಿವೃತ್ತರಾಗಿದ್ದರು.