ಕುಂದಾಪುರ, ಮೇ 31 (DaijiworldNews/DB): ಶಿಲ್ಪಾಳದ್ದು ಆತ್ಮಹತ್ಯೆಯಲ್ಲ, ಜಿಹಾದಿಗಳ ಕ್ರೌರ್ಯದಿಂದ ನಡೆದ ಕೊಲೆಯೆಂದೇ ಭಾವಿಸಬಹುದು. ಮತ್ತೆ ಮತ್ತೆ ಇಂಥಹ ಘಟನೆಗಳು ಕಾಶ್ಮೀರ, ಕೇರಳದಂತೆ ಈ ಭಾಗದಲ್ಲಿಯೂ ನಡೆಯುತ್ತಿದೆ. ಹಿಂದೂ ಸಮಾಜ ಜಾಗೃತವಾಗಬೇಕಾಗಿದೆಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.
ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಡುಪಿ ಜಿಲ್ಲೆ, ಕುಂದಾಪುರ ಪ್ರಖಂಡದವತಿಯಿಂದನಡೆದ ಲವ್ ಜಿಹಾದ್ ವಿರುದ್ಧ ಬೃಹತ್ ಪ್ರತಿಭಟನೆ, ಜಾಗೃತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲವ್ ಜಿಹಾದ್ನಂತಹ ಕೃತ್ಯಗಳಿಗೆ ಮುಸ್ಲಿಂ ಮುಖಂಡರು ಸಹಕಾರ ಕೊಡುತ್ತಿದ್ದಾರೆ. ಇಂಥಹ ಚಟುವಟಿಕೆಗಳನ್ನು ಮುಂದುವರಿಸಿದರೆ ತಕ್ಕ ಉತ್ತರ ಹಿಂದೂ ಸಮಾಜ ನೀಡಲಿದೆ. ಹಿಜಾಬ್ ವಿಚಾರದಲ್ಲಿ ಆರ್ಥಿಕ ನಿರ್ಬಂಧ ವಿಧಿಸಿದಂತೆ ಕುಂದಾಪುರದಲ್ಲಿಯೂ ಆರ್ಥಿಕ ಬಹಿಷ್ಕಾರ ಮಾಡಲಿದ್ದಾರೆ ಎಂದರು.
ಕಳೆದ 20 ವರ್ಷಗಳಿಂದ ಲವ್ ಜಿಹಾದ್ ಮೂಲಕ ಇಸ್ಲಾಂಗೆ ಮತಾಂತರ ನಡೆಸುವ ಕೃತ್ಯ ನಡೆಯುತ್ತಲೆ ಬಂದಿದೆ. ಅದರ ಬಗ್ಗೆ ಸಮಾಜವನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಿಕೊಂಡು ಬಂದರೂ ಕೂಡಾ ಶಿಲ್ಪಾಳ ಸಾವಾಗಿದೆ. ನಮ್ಮ ಹಿಂದೂ ಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳಬೇಕಾಗಿದೆ. ಜಿಹಾದಿಗಳ ಷಡ್ಯಂತ್ರವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಶರಣ್ ಪಂಪ್ವೆಲ್ ಹೇಳಿದರು.
ಆರೋಪಿ ಅಜೀಜ್ನ ಬಂಧನವಾದರೆ ಸಾಲದು, ಆತನ ಪತ್ನಿ ಸಲ್ಮಾಳ ಬಂಧನವಾಗಬೇಕು. ಈ ಬಗ್ಗೆ ಉನ್ನತ ತನಿಖೆಯಾಗಬೇಕು. ಇದರ ಹಿಂದೆ ಯಾವ ಸಂಘಟನೆಯ ಕೈವಾಡ ಇದೆ ಎನ್ನುವುದು ಬಹಿರಂಗವಾಗಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲ್ಲಿದ್ದೇವೆ. ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.
ಮೃತ ಶಿಲ್ಪ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರವನ್ನುಅವರುಒತ್ತಾಯಿಸಿದರು.
ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಮಾತನಾಡಿ, ಕರಾವಳಿಯಲ್ಲಿ ದುರ್ಗಾವಾಹಿನಿ ತಂಡಗಳು ಇನ್ನಷ್ಟು ರಚನೆಯಾಗಲಿದೆ. ಟಾಸ್ಕ್ ಪೊರ್ಸ್ ಮಾದರಿಯಲ್ಲಿ ಕೆಲಸ ಮಾಡಲಿದೆಎಂದರು.ಅಜೀಜ್ನ ಪರವಾಗಿ ಯಾವ ವಕೀಲರು ವಾದ ಮಾಡಬೇಡಿ ಎಂದು ಹೇಳಿದರು.
ಬಜರಂಗದಳ ಜಿಲ್ಲಾ ಕಾರ್ಯದರ್ಶಿ ದಿನೇಶ ಮೆಂಡನ್ ಮಾತನಾಡಿ, ಶಿಲ್ಪ ಆತ್ಮಹತ್ಯೆಯಲ್ಲಿ ಜಿಹಾದಿಗಳ ವ್ಯವಸ್ಥಿತ ಷಡ್ಯಂತ್ರವಿದೆ. ಆರೋಪಿ ಅಜೀಜ್ನ ಪತ್ನಿ ಸಲ್ಮಾಳ ಬಂಧನವಾಗಬೇಕು. ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಕೆಣಕಲು ಬಂದರೆ ತ್ರಿಶೂಲ ದೀಕ್ಷೆಯ ಪ್ರಯೋಗಕ್ಕೂ ಸಿದ್ದವಾಗಬೇಕು ಎಂದರು.
ವಿಹಿಂಪ ಕೇಂದ್ರೀಯ ವಿಶ್ವಸ್ಥ ಮಂಡಳಿ ಸದಸ್ಯ ಪ್ರೇಮಾನಂದ ಶೆಟ್ಟಿ ಕಟ್ಕೇರೆ ಮಾತನಾಡಿದರು. ಈ ಶ್ರೀಧರ ಬಿಜೂರು, ಮಾತೃಶಕ್ತಿಯ ಪೂರ್ಣಿಮಾ ಸುರೇಶ, ಶಿಲ್ಪಳ ಸಹೋದರ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಸುರೇಂದ್ರ ಮಾರ್ಕೋಡು ಕಾರ್ಯಕ್ರಮ ನಿರ್ವಹಿಸಿ, ವಿಜಯ ಶೆಟ್ಟಿ ವಂದಿಸಿದರು.