ಮಂಗಳೂರು, ಮೇ 31 (DaijiworldNews/HR): ದಕ್ಷಿಣ ಕನ್ನಡ ಜಿಲ್ಲಾ ಕರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೨೧ನೆಯ ಸಾಲಿನ ಪ್ರತಿಷ್ಠಿತ ಪ.ಗೋ. ಪ್ರಶಸ್ತಿಯನ್ನು ಹೊಸ ದಿಗಂತ ಪತ್ರಿಕೆಯ ವರದಿಗಾರ ಮಿಥುನ ಕೊಡೆತ್ತೂರು ಅವರಿಗೆ ಪ್ರದಾನಿಸಲಾಯಿತು.
ಮಿಥುನ್ ಅವರ 'ಈಗ ಕೈ ಮಗ್ಗಗಳತ್ತ ಪದವೀಧರರ ಚಿತ್ತ... ಸೀರೆಗಳಲ್ಲಿ ನೇಕಾರರ ಚಿತ್ರ!' ವರದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯು 10,001ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ. ಮಂಗಳವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಿ.ಸಿ.ಪಿ. ಹರಿರಾಮ್ ಶಂಕರ್ ಪ್ರಶಸ್ತಿ ಪ್ರದಾನಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಸಮಸ್ಯೆ, ಸವಾಲುಗಳನ್ನು ತಮ್ಮ ಬರಹಗಳ ಮೂಲಕ ಪರಿಚಯಿಸುವುದರೊಂದಿಗೆ ಆಡಳಿತವನ್ನು ಎಚ್ಚರಿಸುವ ಕೆಲಸವನ್ನು ಪತ್ರರ್ತರು ಬದ್ಧತೆಯಿಂದ ನರ್ವಹಿಸಬೇಕು. ಪತ್ರಿಕಾ ರ್ಮಕ್ಕೆ ಅಪಚಾರವಾಗದೆ, ಆಡಳಿತದ ಪಥ ತಪ್ಪಿದಾಗ ಎಚ್ಚರಿಸುವ ಕೆಲಸ ಮಾಡಬೇಕು ಎಂದರು.
ಉತ್ತಮ ಕೆಲಸಗಳನ್ನು ಮಾಡಿದಾಗ ಅಂತಹ ಪತ್ರರ್ತರನ್ನು ಗುರುತಿಸಿ ಗೌರವಿಸುವ ಕೆಲಸ ನಿರಂತರವಾಗಿ ಆಗಲಿ. ಮಿಥುನ್ ಕೊಡೆತ್ತೂರು ಅವರು ತಮ್ಮ ಉತ್ತಮ ವರದಿಯಿಂದ ಇಂದು ಪ್ರಶಸ್ತಿಗೆ ಪಾತ್ರರಾಗುತ್ತಿದ್ದು, ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಹರಿರಾಮ್ ಶಂಕರ್ ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ಕೆ. ಆನಂದ ಶೆಟ್ಟಿ ಮಾತನಾಡಿ, ಪದ್ಯಾಣ ಗೋಪಾಲಕೃಷ್ಣ ಅವರು ಗ್ರಾಮೀಣ ಭಾಗದ ವರದಿಗಳ ಬಗ್ಗೆ ವಿಶೇಷ ಒಲವು ತೋರುತ್ತಿದ್ದರು. ನೇರ ನುಡಿಯ ಉತ್ತಮ ಪತ್ರರ್ತರಾಗಿದ್ದ ಅವರು ಯುವ ಪತ್ರರ್ತರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಕಳೆದ 23 ವರ್ಷಗಳಿಂದ ಪ.ಗೋ ಪ್ರಶಸ್ತಿ ನೀಡಲಾಗುತ್ತಿದ್ದು, ಇದೊಂದು ಪ್ರತಿಷ್ಠಿತ ಪ್ರಶಸ್ತಿಯಾಗಿ ಗುರುತಿಸಿಕೊಂಡಿದೆ. ಹಿರಿಯ ಪತ್ರಕರ್ತರಾಗಿದ್ದ ಎನ್.ಆರ್. ಉಭಯ, ಎ.ವಿ. ಮಯ್ಯ, ನರಸಿಂಹ ರಾವ್ ಇವರು ಕೂಡ ಜಿಲ್ಲೆಯಲ್ಲಿ ಉತ್ತಮ ಪತ್ರರ್ತರಾಗಿ ಕೆಲಸ ಮಾಡಿದವರು. ಇವರ ಬದುಕು-ಸಾಧನೆಯನ್ನು ಸ್ಮರಿಸುವ ಕರ್ಯಕ್ರಮ ಪತ್ರಕರ್ತರ ಸಂಘದಿಂದ ಆಗಲಿ ಎಂದು ಸಲಹೆ ನೀಡಿದರು.
ಪತ್ರಕರ್ತ ಸಂಘದ ರಾಜ್ಯ ಕರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪದ್ಯಾಣ ಗೋಪಾಲಕೃಷ್ಣ ಅವರ ಹಿರಿಯ ಪುತ್ರ ವಿಶ್ವೇಶ್ವರ ಉಪಸ್ಥಿತರಿದ್ದರು.