ಕೊಚ್ಚಿ, ಜ 10 (MSP): ಜಲಂಧರ್ ಧರ್ಮಪ್ರಾಂತ್ಯದ ಬಿಷಪ್ ಫ್ರಾಂಕೋ ಮುಳಕ್ಕಲ್ ನ ಲೈಂಗಿಕ ಶೋಷಣೆಯ ವಿರುದ್ದ ಮಾದ್ಯಮಗಳ ಮುಂದೆ ಮಾತನಾಡಿದ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಲೂಸಿ ಕಲಪ್ಪುರ ಅವರಿಗೆ ಧಾರ್ಮಿಕ ತಾತ್ವಾದರ್ಶಗಳನ್ನು ಪಾಲಿಸದೆ ನಡೆಯುತ್ತಿರುವುದರ ವಿರುದ್ದ ನೋಟಿಸ್ ನೀಡಲಾಗಿದೆ. ಮಾನಂತವಾಡಿಯ ಸೈಂಟ್ ಮೇರಿಸ್ ಪ್ರಾಂತ್ಯಕ್ಕೆ ಸೇರಿದ ಲೂಸಿ ಅಂಶಗಳೆಂದರೆ, ಸಿಸ್ಟರ್ ಆದರೂ ಅವರು ಕವನಗಳನ್ನು ರಚಿಸುತ್ತಾರೆ, ಕಾರು ಪರ್ಚೇಸ್ ಮಾಡಿದ್ದಾರೆ ಎನ್ನುವುದು ಅವರಿಗೆ ನೋಟಿಸ್ ನೀಡಲು ಪ್ರಮುಖ ಕಾರಣ.
ಸಿಸ್ಟರ್ ಲೂಸಿ ಅವರು ಸುಪೀರಿಯರ್ಗಳ ಅನುಮತಿ ಪಡೆಯದೆ, ಅವರ ಗಮನಕ್ಕೂ ತರದಂತೆ ಡ್ರೈವಿಂಗ್ ಲೈಸನ್ಸ್ ಪಡೆದುಕೊಂಡಿದ್ದಾರೆ, ಸಾಲ ಮಾಡಿ ವಾಹನ ಖರೀದಿಸಿದ್ದಾರೆ ಮತ್ತು ಹಣ ಖರ್ಚು ಮಾಡಿ ಪುಸ್ತಕ ಪ್ರಕಟಿಸಿದ್ದಾರೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ಕವನ ಸಂಕಲನ ಪ್ರಕಟಣೆಗೆ ಪ್ರಾಂತ್ಯದ ಸುಪೀರಿಯರ್ ಅವರು ಅನುಮತಿ ನಿರಾಕರಿಸಿದ್ದರೂ ಲೂಸಿ ಅವರು 'ಸ್ನೇಹಮಳಯಿಲ್' ಎಂಬ ಸಂಕಲನ ಪ್ರಕಟಿಸಿದ್ದರು.